Recent Posts

Saturday, April 25, 2026
ದಕ್ಷಿಣ ಕನ್ನಡಸುದ್ದಿ

ಮಂಗಳೂರು; ಅಪಘಾತದಲ್ಲಿ ಗಾಯಾಳು ಯುವಕನ ಮೆದುಳು ನಿಷ್ಕ್ರಿಯ : ಅಂಗಾಗ ದಾನಕ್ಕೆ ಕುಟುಂಬ ನಿರ್ಧಾರ – ಕಹಳೆ ನ್ಯೂಸ್

ಮಂಗಳೂರು: ಬಿಕರ್ನಕಟ್ಟೆಯಲ್ಲಿ ಸ್ಕೂಟರ್ ಡಿವೈಡರ್‌ಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ, ಧೀರಜ್ ಅವರ ಮೆದುಳು ನಿಷ್ಕ್ರಿಯಗೊಂಡಿದ್ದು, ವೈದ್ಯರ ಸಲಹೆಯ ಮೇರೆಗೆ ಅಂಗಾ0ಗ ದಾನ ಮಾಡುವುದಾಗಿ ಮೃತನ ಸಂಬ0ಧಿಕರು ತಿಳಿಸಿದ್ದಾರೆ

ಮೇ 29ರ ಮುಂಜಾನೆ ಘಟನೆ ನಡೆದಿದ್ದು, ಗಣೇಶ್ ಎಂಬಾತ ಧೀರಜ್ ನನ್ನು ಮನೆಗೆ ಬಿಟ್ಟು ಬರಲು ತೆರಳಿದ್ದು, ಈ ವೇಳೆ ನಿಯಂತ್ರಣ ತಪ್ಪಿದ ಸ್ಕೂಟರ್ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ.
ಸ್ಕೂಟರ್ ನಿಂದ ರಸ್ತೆಗೆ ಬಿದ್ದು ಗಾಯಗೊಂಡಿದ್ದ ಗಣೇಶ್ ಹಾಗೂ ಧೀರಜ್ ನನ್ನು ನಸುಕಿನ ಜಾವ 2:30ರ ವೇಳೆಗೆ ಸೆಂಟ್ರಲ್ ರೈಲ್ವೇ ಸ್ಟೇಷನ್ ಗೆ ಬಾಡಿಗೆಗೆಂದು ತೆರಳುವ ಆಟೋ ಚಾಲಕ ಪ್ರವೀಣ್ ಕುಮಾರ್ ಗಮನಿಸಿ ಸಾರ್ವಜನಿಕರ ಸಹಾಯದಿಂದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು