Tuesday, September 8, 2026
ಬಂಟ್ವಾಳ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ವಿಟ್ಲ ಇದರ ಕಲ್ಲಡ್ಕ ವಲಯದ ಸ್ವಸಾಯ ಸಂಘಗಳ ವೀರಕಂಬ ಒಕ್ಕೂಟದ ನೂತನ ಅಧ್ಯಕ್ಷರಾಗಿ ಶ್ರೀಮತಿ ಶಾಂಭವಿ ಆಚಾರ್ಯ ಆಯ್ಕೆ- ಕಹಳೆ ನ್ಯೂಸ್

ಕಲ್ಲಡ್ಕ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ವಿಟ್ಲ ಇದರ ಕಲ್ಲಡ್ಕ ವಲಯದ ಸ್ವಸಾಯ ಸಂಘಗಳ ವೀರಕಂಬ ಒಕ್ಕೂಟದ ಮೂರು ವರ್ಷದ ಅವಧಿಯ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವು ಕಲ್ಲಡ್ಕ ವಲಯದ ಮೇಲ್ವಿಚಾರಕರಾದ ಶ್ರೀಮತಿ ಸುಗುನ ಶೆಟ್ಟಿ ಮತ್ತು ಸೇವಾ ಪ್ರತಿನಿಧಿ ಶ್ರೀಮತಿ ರೇವತಿ ಕಲ್ಲಡ್ಕ ವಲಯ, ಹಾಗೂ ಅಧ್ಯಕ್ಷ ಈಶ್ವರ ನಾಯ್ಕ ಇವರ ಉಪಸ್ಥಿತಿಯಲ್ಲಿ ನಡೆಯಿತು.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ವೀರಕಂಬ ಒಕ್ಕೂಟದ ನೂತನ ಅಧ್ಯಕ್ಷರಾಗಿ ಶ್ರೀಮತಿ ಶಾಂಭವಿ ಆಚಾರ್ಯ, ಉಪಾಧ್ಯಕ್ಷರಾಗಿ ಶ್ರೀಯುತ ಹರೀಶ್ ಬಂಗೇರ, ಕಾರ್ಯದರ್ಶಿಯಾಗಿ ಪದ್ಮಾವತಿ, ಜೊತೆ ಕಾರ್ಯದರ್ಶಿಯಾಗಿ ಆನಂದ, ಕೋಶಾಧಿಕಾರಿಯಾಗಿ ಪ್ರೇಮ ಆಚಾರ್ಯ, ಉಪಸಮಿತಿ ಸದಸ್ಯರಾಗಿ ಶ್ರೀಮತಿ ಮೀನಾಕ್ಷಿ, ಶೋಭಾ ಯೋಗೀಶ್ ರನ್ನು ಆಯ್ಕೆ ಮಾಡಲಾಯಿತು .

ಈ ಸಂದರ್ಭದಲ್ಲಿ ವೀರಕಂಬ ಒಕ್ಕೂಟದ ಸ್ವಸಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.