Recent Posts

Sunday, September 13, 2026
ಕ್ರೈಮ್ಸುಳ್ಯ

ಸುಳ್ಯದ ನೆರೆಮನೆಯ ಐದು ವರ್ಷದ ಬಾಲಕಿಗೆ ಚಾಕಲೇಟ್ ಅಮಿಷವೊಡ್ದಿ ಸುಮಾರು ನಾಲ್ಕು ತಿಂಗಳಿಂದ ನಿರಂತರ ಅತ್ಯಾಚಾರ ; ಆರೋಪಿಯನ್ನು ಬಂಧಿಸಿದ ಬೆಳ್ಳಾರೆ ಪೊಲೀಸರು – ಕಹಳೆ ನ್ಯೂಸ್

ಸುಳ್ಯ, ಜು 29 :  ನೆರೆಮನೆಯ ಐದು ವರ್ಷದ ಬಾಲಕಿಗೆ ಚಾಕಲೇಟ್ ಅಮಿಷವೊಡ್ದಿ ಸುಮಾರು ನಾಲ್ಕು ತಿಂಗಳಿಂದ ನಿರಂತರ ಅತ್ಯಾಚಾರ ಎಸಗುತ್ತಿದ್ದ ಆರೋಪಿಯನ್ನು ಬೆಳ್ಳಾರೆ ಠಾಣೆಯ ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಬಂಧಿತನನ್ನು ಬೆಳ್ಳಾರೆ ದರ್ಖಾಸುವಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಸೆಲ್ವ ಕುಮಾರ್ (50) ಎಂದು ಗುರುತಿಸಲಾಗಿದೆ.

ಮನೆ ಸಮೀಪದಲ್ಲಿ ಆಟವಾಡುತ್ತಿದ್ದ ನೆರೆಮನೆಯ ಐದರ ಹರೆಯದ ಅಪ್ರಾಪ್ತೆಗೆ ಚಾಕಲೇಟು ನೀಡಿ ಆರೋಪಿ ಪುಸಲಾಯಿಸಿ ತನ್ನ ಮನೆಯೊಳಕ್ಕೆ ಕರೆದೊಯ್ದು ನಾಲ್ಕು ತಿಂಗಳಿನಿಂದ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದ.

ಜು.೨೮ ರ ಮಂಗಳವಾರ ನಡೆದ ಘಟನೆಯನ್ನು ಅಪ್ರಾಪ್ತೆ ಹೆತ್ತವರಲ್ಲಿ ತಿಳಿಸಿದ್ದು, ಹೆತ್ತವರು ವಿಚಾರಣೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.ಅದರಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿ ವಿರುದ್ಧ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.