Tuesday, September 8, 2026
ಸುದ್ದಿ

ಮುಂಬೈ ದಾಳಿ ಕೈವಾಡ – ಅಮೆರಿಕದಲ್ಲಿ ಪಾಕಿಸ್ತಾನ ಮೂಲದ ತಹಾವ್ವುರು ರಾಣಾ ಬಂಧನ – ಕಹಳೆ ನ್ಯೂಸ್

ವಾಷಿಂಗ್ಟನ್, ಜೂ 20  : ಭಾರತದ ಹಸ್ತಾಂತರ ಬೇಡಿಕೆಯ ಅನ್ವಯ ಲಾಸ್‌ ಏಂಜಲೀಸ್‌ ಪೊಲೀಸರು 2008ರ ಮುಂಬೈ ದಾಳಿಯಲ್ಲಿ ಕೈವಾಡವಿರುವ ಪಾಕಿಸ್ತಾನ ಮೂಲದ ಕೆನಡಾ ಉದ್ಯಮಿ ತಹಾವ್ವುರು ರಾಣಾನನ್ನು ಬಂಧಿಸಿದ್ದಾರೆ.

ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತವು ಘೋಷಿತ ಆಪರಾಧಿ ರಾಣಾನನ್ನು ವಶಕ್ಕೆ ನೀಡುವಂತೆ ಬೇಡಿಕೆ ಇಟ್ಟ ಕಾರಣ ಆತನನ್ನು ಮರಳಿ ವಶಕ್ಕೆ ಪಡೆಯಲಾಗಿದೆ. ರಾಣಾ ತನಗೆ ಕೊರೊನಾ ದೃಢಪಟ್ಟಿದೆ ಎಂದು ತಿಳಿಸಿದ್ದ ಕಾರಣ ಇತ್ತೀಚೆಗೆ ಆತನನ್ನು ಬಿಡುಗಡೆ ಮಾಡಲಾಗಿತ್ತು.

ಈ ವಿಚಾರಕ್ಕೆ ಸಂಬಂಧಪಟ್ಟಂತೆ ರಾಣಾ ಪರ ವಕೀಲರಿಗೆ ಜೂನ್‌ 22ರ ಒಳಗಾಗಿ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿದ್ದು, ಸರ್ಕಾರಕ್ಕೆ 26ರ ಒಳಗೆ ಪ್ರತಿಕ್ರಿಯೆಯನ್ನು ಸಲ್ಲಿಕೆ ಮಾಡುವಂತೆ ತಿಳಿಸಿದೆ.