
ಬೆಂಗಳೂರು : ರಾಜ್ಯದಲ್ಲಿ ಇಂದು ಹೊಸದಾಗಿ 127 ಜನರಿಗೆ ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾಗಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 1373 ಕ್ಕೆ ಏರಿಕೆಯಾಗಿದೆ.
ಲಾಕ್ ಡೌನ್ ಸಡಿಲಿಕೆಯಾದ ಬಳಿಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಆತಂಕವನ್ನು ಮೂಡಿಸಿದೆ. ಅದರಲ್ಲೂ ಹಸಿರು ವಲಯದಲ್ಲಿದ್ದ ಜಿಲ್ಲೆಗಳಿಗೂ ಕೊರೊನಾ ವ್ಯಾಪಿಸಿರುವ ಕಳವಳಕ್ಕೆ ಕಾರಣವಾಗಿದೆ.
ಮಂಡ್ಯ ಜಿಲ್ಲೆಯಲ್ಲಿ 61, ಕಲಬುರ್ಗಿ 11, ಹಾಸನ 3, ಧಾರವಾಡ 4, ಯಾದಗಿರಿ 3, ಶಿವಮೊಗ್ಗ 12, ಕೋಲಾರ 3, ದಕ್ಷಿಣ ಕನ್ನಡ 2, ಉಡುಪಿ 4, ವಿಜಯಪುರ1, ಚಿಕ್ಕಮಗಳೂರು 2, ಕಲಬುರಗಿ, ಬೆಂಗಳೂರು 5, ದಾವಣಗೆರೆ 19, ಚಿತ್ರದುರ್ಗ 1, ಉತ್ತರ ಕನ್ನಡ 4, ಪ್ರಕರಣ ಪತ್ತೆಯಾಗಿದೆ.








