
ಮಂಗಳೂರು : ತಣ್ಣೀರುಬಾವಿ ಕಡಲ ತೀರದಲ್ಲಿ ದೋಣಿಯೊಂದು ಮಗುಚಿದ ಪರಿಣಾಮ ಓರ್ವ ನಾಪತ್ತೆಯಾಗಿದ್ದರೆ ಮತ್ತು ಮತ್ತೋರ್ವ ಗಂಭೀರ ಗಾಯಗೊಂಡಿದ್ದಾನೆ.
ಭಾನುವಾರ ರಾತ್ರಿ ಭೀಸಿದ ಭಾರಿ ಗಾಳಿಗೆ ಈ ದುರ್ಘಟನೆ ಸಂಭವಿಸಿದೆ. ಪಣಂಬೂರು ಸಮೀಪ ಕಡಲಿನಲ್ಲಿ ಈ ಘಟನೆ ಸಂಭವಿಸಿದೆ. ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಂಆರ್‌ಪಿಎಲ್ ಪೈಪ್‌ಲೈನ್ ಕಾಮಗಾರಿಯು ತಣ್ಣೀರುಬಾವಿ ಬಳಿಯ ಕಡಲ ತೀರದಲ್ಲಿ ನಡೆಯುತ್ತಿದೆ.
ಉತ್ತರ ಭಾರತ ಮೂಲದ ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ರಾತ್ರಿ ಸುಮಾರು 8:30 ರ ವೇಳೆಗೆ ಬೀಸಿದ ಬಿರುಗಾಳಿಗೆ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿದ್ದ ದೋಣಿ ಮಗುಚಿತು.
ಈ ದೋಣಿಯಲ್ಲಿ ಐವರು ಕಾರ್ಮಿಕರಿದ್ದರು. ಆ ಪೈಕಿ ಓರ್ವ ನೀರಲ್ಲಿ ನಾಪತ್ತೆಯಾಗಿದ್ದರೆ, ಮೂವರನ್ನು ಇತರರು ರಕ್ಷಿಸಿದ್ದಾರೆ.
ಅಲ್ಲದೆ ಓರ್ವನ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪಣಂಭೂರು ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.









