Breaking News : ಉಡುಪಿ ಜಿಲ್ಲೆಯಲ್ಲಿ ಕಳೆದ 3 ದಿನಗಳಿಂದ ಶೀತ, ಕೆಮ್ಮು, ಜ್ವರದಿಂದ ಬಳಲುತ್ತಿದ್ದ ಮತ್ತೊರ್ವ ವ್ಯಕ್ತಿ ಸಂಶಯಾಸ್ಪದ ಸಾವು : ಆತಂಕದಲ್ಲಿ ಜನತೆ – ಕಹಳೆ ನ್ಯೂಸ್

ಉಡುಪಿ: ಕೊರೊನಾ ಮಹಾಮಾರಿಗೆ ಉಡುಪಿ ಜಿಲ್ಲೆಯಲ್ಲಿ ನಿನ್ನೆ ಮೊದಲ ಬಲಿಯಾಗಿರುವ ವಿಷಯ ಮರೆಯುವ ಮುನ್ನವೆ ಮತ್ತೊರ್ವ ವ್ಯಕ್ತಿ ಸಂಶಯಾಸ್ಪದವಾಗಿ ಸಾವನ್ನಪ್ಪಿರುವ ಆತಂಕಕಾರಿ ವಿಷಯ ವರದಿಯಾಗಿದೆ.
ಉಡುಪಿಯ ಬನ್ನಂಜೆ ವಾರ್ಡ್ ನಿವಾಸಿಯಾಗಿರುವ 44 ವರ್ಷದ ವ್ಯಕ್ತಿ ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದಾರೆ.
ಕಳೆದ 3 ದಿನಗಳಿಂದ ಶೀತ, ಕೆಮ್ಮು, ಜ್ವರದಿಂದ ಬಳಲುತ್ತಿದ್ದ ಈತ ಜಿಲ್ಲಾಸ್ಪತ್ರೆಗೆ ದಾಖಲಾಗುವಷ್ಟರಲ್ಲಿ ಮೃತಪಟ್ಟಿದ್ದಾರೆ.
ಕೋವಿಡ್ ಲಕ್ಷಣವಿದ್ದ ಕಾರಣ ಗಂಟಲ ದ್ರವ ಪರೀಕ್ಷೆಗೆ ರವಾನಿಸಲಾಗಿದೆ.
ಮೇಲ್ನೋಟಕ್ಕೆ ಹೃದಯಾಘಾತದಿಂದ ಸಾವಾದಂತೆ ಕಾಣುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಕೋವಿಡ್ ಟೆಸ್ಟ್ ಮಾಡಿಸುತ್ತಿದ್ದೇವೆ ಎಂದು ಆರೋಗ್ಯಾಧಿಕಾರಿ ಸುಧೀರ್ ಚಂದ್ರ ಸೂಡಾ ಮಾಹಿತಿ ನಿಡಿದ್ದಾರೆ.









