Thursday, May 14, 2026
ಸುದ್ದಿ

ಕೊರೊನಾ ಭೀತಿಯ ಲಾಕ್ ಡಾನ್, 54 ದಿನಗಳಿಂದ ಬಾಗಿಲು ಮುಚ್ಚಿದ್ದ ಬ್ಯೂಟಿ ಪಾರ್ಲರ್ ; ಆರ್ಥಿಕ ನೆರವಿಗೆ ಅಸೋಸಿಯೇಷನ್ ಅಧ್ಯಕ್ಷೆ ಬಬಿತಾ ಶೆಟ್ಟಿ ಸರಕಾರಕ್ಕೆ ಮನವಿ – ಕಹಳೆ ನ್ಯೂಸ್

ಆಧುನಿಕ ವಾತಾವರಣದಲ್ಲಿ ಹೆಣ್ಣು ಮಕ್ಕಳ ಪಾಲಿಗೆ ಅತ್ಯಂತ ಅವಶ್ಯಕತೆಯಾಗಿ ಬದಲಾದ ಬ್ಯೂಟಿ ಪಾರ್ಲರ್ ಗಳು ಇದೀಗ ತೆರೆಮರೆಗೆ ಸಂದಿವೆ.

ಕೊರೊನಾ ಭೀತಿಯಲ್ಲಿ ಸುರಕ್ಷತಾ ದೃಷ್ಟಿಯಿಂದ ವ್ಯವಹಾರ ಸ್ಥಗಿತಗೊಳಿಸಿರುವ ಈ ಬ್ಯೂಟಿ ಪಾರ್ಲರ್ಗಳು ಶುಭ ಸಮಾರಂಭಗಳಿಗೂ ಅತಿ ಅವಶ್ಯಕ ಎಂಬಂತಹ ಪರಿಸ್ಥಿತಿ ಸೃಷ್ಟಿಯಾಗಿತ್ತು .
ಇದೀಗ ಕಳೆದ 54 ದಿನಗಳಿಂದ ಬಾಗಿಲು ಮುಚ್ಚಿದ್ದ ಈ ಬ್ಯೂಟಿ ಪಾರ್ಲರ್ ಗಳನ್ನು ನಂಬಿದ ಸಾವಿರಾರು ಮಂದಿ ಅತಂತ್ರರಾಗಿದ್ದಾರೆ .

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು


ಅವಿಭಾಜಿತ ಜಿಲ್ಲೆಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಬ್ಯೂಟಿ ಪಾರ್ಲರ್ ಸಂಬಂಧಿತ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ .ಶುಭ ಸಮಾರಂಭಗಳ ತಿಂಗಳಾದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿಯೇ ಕೊರೊನಾ ಭೀತಿಯ ಲಾಕ್ ಡಾನ್ ಈ ವೃತ್ತಿಯನ್ನೇ ನಂಬಿದ ಮಂದಿಯನ್ನು ಆರ್ಥಿಕ ಸಂಕಷ್ಟಕ್ಕೀಡಾಗಿಸಿದೆ.ಸೌಂದರ್ಯ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸಿರುವ ಬ್ಯೂಟಿ ಪಾರ್ಲರ್ ಗಳನ್ನು ನಂಬಿದವರ ಪಾಲಿಗೆ ಪ್ರಸ್ತುತ ‘ಅಭಯ’ದ ಬದಲಿಗೆ ಭಯ ಉಂಟು ಮಾಡಿದೆ .
ದಕ್ಷಿಣ ಕನ್ನಡ ಹಾಗೂ ಉಡುಪಿ ಉಭಯ ಜಿಲ್ಲೆಗಳಲ್ಲಿ ಬ್ಯೂಟಿಪಾರ್ಲರ್ ಸಂಬಂಧಿತ ಕೆಲಸದಲ್ಲಿ ತೊಡಗಿಸಿ ಕೊಂಡವರ ಸಂಖ್ಯೆ ಸುಮಾರು 10 ಸಾವಿರವನ್ನು ದಾಟುತ್ತದೆ .ಆಧುನಿಕ ಕಾಲದ ಅನಿವಾರ್ಯತೆಯ ಸೌಂದರ್ಯ ಕ್ಷೇತ್ರದಲ್ಲಿ ಬೆಂಗಾವಲಾಗಿ ತೊಡಗಿಸಿಕೊಂಡಿದ್ದ ಇವರ ಕೆಲಸ ಮಾರ್ಚ್ 20 ರಿಂದ ಸ್ಥಗಿತಗೊಂಡಿದೆ.ಮಂಗಳೂರು ಜಿಲ್ಲಾ ಬ್ಯೂಟಿ ಪಾರ್ಲರ್ ಮಾಲಕರ ಅಸೋಸಿಯೇಷನ್ ನಲ್ಲಿ 250 ನೋಂದಾಯಿತ ಸದಸ್ಯರಿದ್ದಾರೆ. ಈ ಬ್ಯೂಟಿ ಪಾರ್ಲರ್ ಗಳಲ್ಲಿ ಕೆಲಸ ಮಾಡುವವರೇ ಸುಮಾರು 1250 ಕ್ಕೂ ಹೆಚ್ಚುಮಂದಿ ಇದ್ದಾರೆ.

ಅಸೋಸಿಯೇಷನ್ ನಲ್ಲಿ ನೋಂದಾವಣೆಯಾದ ನೂರಾರು ಬ್ಯೂಟಿ ಪಾರ್ಲರ್ಗಳು ವಿವಿಧ ತಾಲ್ಲೂಕು ,ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ .ಬ್ಯೂಟಿ ಪಾರ್ಲರ್ ಗಳನ್ನು ತೆರೆಯಲು ಅವಕಾಶ ಸಿಕ್ಕರೂ ಸುರಕ್ಷತೆಯ ದೃಷ್ಟಿಯಿಂದ ಗ್ರಾಹಕರು ಭೇಟಿ ನೀಡುವ ಸಾಧ್ಯತೆ ಕಡಿಮೆ ಇದೆ .

ಬ್ಯೂಟಿ ಪಾರ್ಲರ್ ಗಳನ್ನು ನಂಬಿರುವ ಸಾವಿರಾರು ಮಂದಿ ನಷ್ಟದಿಂದ ಸಂಕಷ್ಟಕ್ಕೀಡಾಗಿದ್ದಾರೆ .ತೊಂದರೆಗೆ ಸಿಲುಕಿರುವವರ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದೇವೆ . ಸರಕಾರದಿಂದ ಕಿಟ್ ನೀಡುವ ಹಾಗೂ ಆರ್ಥಿಕ ನೆರವು ಸಿಗುವ ನಿರೀಕ್ಷೆಯಲ್ಲಿದ್ದೇವೆ ಎಂದು ಮಂಗಳೂರು ಬ್ಯೂಟಿ ಪಾರ್ಲರ್ ಮಾಲಕರ ಅಸೋಸಿಯೇಷನ್ ಅಧ್ಯಕ್ಷರಾದ ಬಬಿತಾ ಶೆಟ್ಟಿ ತಿಳಿಸಿದ್ದಾರೆ