Thursday, May 14, 2026
ಸುದ್ದಿ

ಜುಲೈ 1 ರಿಂದ ಸಿಬಿಎಸ್‌ಇ 10 ಹಾಗೂ 12 ನೇ ತರಗತಿ ಪರೀಕ್ಷೆ – ಕಹಳೆ ನ್ಯೂಸ್

ನವದೆಹಲಿ, ಮೇ 09  : ಕೇಂದ್ರಿಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಯ 10 ಹಾಗೂ 12 ನೇ ತರಗತಿಯ ಬಾಕಿ ಉಳಿದ 29 ವಿಷಯಗಳ ಪರೀಕ್ಷೆಗಳನ್ನು ಜುಲೈ 1 ರಿಂದ 15 ರ ನಡುವೆ ನಡೆಸಲಾಗುತ್ತದೆ ಎಂದು ಕೇಂದ್ರ ಮಾನವ ಸಂಪದ ಅಭಿವೃದ್ಧಿ ಸಚಿವ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ಶುಕ್ರವಾರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಹಾಗೆಯೇ ಐಐಟಿ, ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಗಳಿಗೆ ನಡೆಸಲಾಗುವ ಜಾಯಿಂಟ್‌ ಎಂಟ್ರೆನ್ಸ್‌ ಎಕ್ಸಾಮಿನೇಶನ್‌ ಜು. 18-23 ರ ನಡುವೆ ನಡೆಯಲಿದೆ. ಅದಕ್ಕಾಗಿ ಮೊದಲು ಬಾಕಿ ಉಳಿದಿರುವ ಪರೀಕ್ಷೆ ನಡೆಸಲು ಸಿಬಿಎಸ್‌ಇ ನಿರ್ಧರಿಸಿದೆ.

ಇನ್ನು ಜುಲೈ 1 ರಿಂದ 15 ರ ನಡುವೆ ನಡೆಯುವ ಸಿಬಿಎಸ್‌ಇ 10 ಹಾಗೂ 12 ನೇ ತರಗತಿ ಪರೀಕ್ಷೆಗಳು ಫಲಿತಾಂಶವನ್ನು ಆಗಸ್ಟ್‌ ಅಂತ್ಯದ ಒಳಗಾಗಿ ಪ್ರಕಟಿಸಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.

ದೇಶದಲ್ಲಿ ಕೊರೊನಾ ಲಾಕ್‌ಡೌನ್‌ ಕಾರಣದಿಂದಾಗಿ ಬಾಕಿ ಉಳಿದಿರುವ ಪರೀಕ್ಷೆ ಮುಂದೂಡಲಾಗಿತ್ತು.