Monday, June 8, 2026
ಸುದ್ದಿ

ಸಜೀಪಮುನ್ನೂರು ಗ್ರಾಮದ ನೇತ್ರಾವತಿ ನದಿ ಕಿನಾರೆಯ ಮರಳುಗಾರಿಕೆ ಅಡ್ಡೆಗೆ ಅಧಿಕಾರಿಗಳಿಂದ ದಾಳಿ – ಕಹಳೆ ನ್ಯೂಸ್

ಬಂಟ್ವಾಳ : ಸಜೀಪಮುನ್ನೂರು ಗ್ರಾಮದ ನೇತ್ರಾವತಿ ನದಿ ಕಿನಾರೆಯಲ್ಲಿ ಮರಳುಗಾರಿಕೆ ನಡೆಯುತ್ತಿದ್ದು, ಈ ವೇಳೆ ಧಕ್ಕೆ ಬಳಿ ಕಂದಾಯ ಹಾಗೂ ಗಣಿ ಇಲಾಖೆಯ ಅಕಾರಿಗಳು ದಾಳಿ ನಡೆಸಿದ್ದರೆ. ದಾಳಿ ವೇಳೆ ಸುಮಾರು 800 ಮೆಟ್ರಿಕ್ ಟನ್ ಮರಳಿನ ಸಂಗ್ರಹ ಕಂಡುಬಂದಿದ್ದು, ಅಧಿಕಾರಿಗಳು ಅದನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.

ಜಾಹೀರಾತು

ಮರಳುಗಾರಿಕೆಯ ಧಕ್ಕೆಯ ಬಳಿ ಯಾವುದೇ ಬೋಟ್‍ಗಳು ಪತ್ತೆಯಾಗಿಲ್ಲ, ಆದರೆ ಅಲ್ಲೇ ಸಮೀಪದ ಜಾಗದಲ್ಲಿ ಸುಮಾರು 800 ಮೆಟ್ರಿಕ್ ಟನ್ ಮರಳು ಪತ್ತೆಯಾಗಿದೆ. ಹೀಗಾಗಿ ಮರಳನ್ನ ವಶಪಡಿಸಿಕೊಂಡು ಗಣಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಬಳಿಕ ದಾಖಲೆ ಪರಿಶೀಲಿಸಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ ಅವರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು