Thursday, May 14, 2026
ಸುದ್ದಿ

ಬೆಂಗಳೂರು: ಹೆಣ್ಣಿನ ತೀಟೆಗೆ ಬಿದ್ದು ಕೊಲೆಯಾದ ಯುವಕ–ಕಹಳೆ ನ್ಯೂಸ್

ಬೆಂಗಳೂರು, [ಜ.19]: ಕಾರಿನಲ್ಲಿ ಯುವಕನೊಬ್ಬನನ್ನು ಶಿವಾಜಿನಗರದಿಂದ  ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬಾಗಲೂರಿನ ಬಳಿ ಶನಿವಾರ ರಾತ್ರಿ ನಡೆದಿದೆ

ಕಮರ್ಷಿಯಲ್ ಸ್ಟ್ರೀಟ್‌ನ ಜ್ಯುವೆಲರಿ ಬಡಾವಣೆಯ ಅಬ್ದುಲ್ ಮಸಿನ್(26) ಹತ್ಯೆಯಾದವ ಎಂದು ಗುರುತಿಸಲಾಗಿದೆ. ಮಸಿನ್‌ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಶಿವಾಜಿನಗರದಿಂದ  ಶನಿವಾರ ರಾತ್ರಿ ಮಸಿನ್‌ನನ್ನು ಕಾರಿನಲ್ಲಿ  ಕರೆದುಕೊಂಡು ಹೋದ ನಾಲ್ಕೈದು ಜನರ ತಂಡ ಕಾಡುಸಣ್ಣಪನಹಳ್ಳಿಯ ನಿರ್ಜನ ಪ್ರದೇಶವೊಂದರಲ್ಲಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಈ ಕೃತ್ಯವೆಸಗಲಾಗಿದೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಆದರೆ ಇನ್ನೂ ಈ ಬಗ್ಗೆ ಪೊಲೀಸರು ಖಚಿತಪಡಿಸಿಲ್ಲ…