Wednesday, April 29, 2026
ಸುದ್ದಿ

ಫಿಲೋಮಿನಾ ಯೂತ್ ರೆಡ್ ಕ್ರಾಸ್ ಸೊಸಾೈಟಿಯಿದಿಂದ ಸ್ವಚ್ಛ ಭಾರತ ಅಭಿಯಾನ- ಕಹಳೆ ನ್ಯೂಸ್

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಯೂತ್ ರೆಡ್ ಕ್ರಾಸ್ ಸೊಸಾೈಟಿ ಮತ್ತು ಭಾರತೀಯ ರೆಡ್ ಕ್ರಾಸ್ ಸೊಸೈಟಿ, ಪುತ್ತೂರು ಇದರ ಸಹಯೋಗದೊಂದಿಗೆ ಜನವರಿ 16 ರಂದುಬೀರಮಲೆ ಬೆಟ್ಟದಲ್ಲಿ ‘ಸ್ವಚ್ಛ ಭಾರತ ಅಭಿಯಾನ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಯೂತ್ ರೆಡ್ ಕ್ರಾಸ್ ಸೊಸಾೈಟಿಯ 55 ಸ್ವಯಂಸೇವಕರು ಬೈಪಾಸ್ ರಸ್ತೆಯಿಂದ ಆರಂಭಿಸಿ, ಬೀರಮಲೆ ಬೆಟ್ಟದ ಗಾಂಧಿ ಮಂಟಪದ ಆವರಣವನ್ನು ಸ್ವಚ್ಛ ಗೊಳಿಸಿದರು.
ಈ ಅಭಿಯಾನವನ್ನು ಸಂತ ಫಿಲೋಮಿನಾ ಕಾಲೇಜಿನ ಯೂತ್ ರೆಡ್ ಕ್ರಾಸ್ ಸೊಸಾೈಟಿಯ ನಿರ್ದೇಶಕಿ ವೆಂಕಟೇಶ್ವರಿ ಕೆ ಎಸ್, ಸಹ ನಿರ್ದೇಶಕರಾದ ನ್ಯಾನ್ಸಿ ಲವೀನಾ ಪಿಂಟೋ, ನೀಲೇಶ್ ಜಾಯ್ ಡಯಾಸ್ ಮತ್ತು ಅಧ್ಯಕ್ಷ ಶೇಕ್ ಮೊಹಮ್ಮದ್ ಫಾಯಿಝ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂಧರ್ಭದಲ್ಲಿ ಬಾರತೀಯ ರೆಡ್ ಕ್ರಾಸ್ ಸೊಸೈಟಿ ಪುತ್ತೂರು ಇದರ ಕಾರ್ಯದರ್ಶಿ ಎ ಜಗಜೀವನ್‍ದಾಸ್ ರೈ, ಬೀರಮಲೆ ಬೆಟ್ಟ ಅಭಿವೃಧ್ಧಿ ಸಮಿತಿಯ ಕಾರ್ಯದರ್ಶಿ ಸುಬ್ರಾಯ ಅಮ್ಮಣ್ಣಾಯ ಮತ್ತು ಕೋಶಾಧಿಕಾರಿ ದತ್ತಾತ್ರೇಯ ರಾವ್ ಅಭಿಯಾನದಲ್ಲಿ ಉಪಸ್ಥಿತರಿದ್ದು, ಮೆಚ್ಚುಗೆ ವ್ಯಕ್ತಪಡಿಸಿದರು.