Tuesday, April 28, 2026
ಸುದ್ದಿ

ಜನವರಿ 17ರಂದು ಮಂಗಳೂರಿನಲ್ಲಿ ಅಭಿಯಾನಕ್ಕೆ ಚಾಲನೆ.- ಕಹಳೆ ನ್ಯೂಸ್

ಮಂಗಳೂರು, ಜನವರಿ 15  : ಯುವಜನರಲ್ಲಿ ಸಾಮಾಜಿಕ ಸೇವಾ ಪ್ರಜ್ಞೆಯನ್ನು ಘೋಷಿಸುವ ‘ಉತ್ತಮನಾಗು ಉಪಕಾರಿಯಾಗು’ ಎಂಬ ಸ್ವಾಮಿ ವಿವೇಕಾನಂದರ ಜೀವನ ಸಂದೇಶವನ್ನು ಸಾರುವ ಬೃಹತ್ ಯುವ ಅಭಿಯಾನಕ್ಕೆ  ಇದೇ ಬರುವ ಜನವರಿ 17ರಂದು, ಮಂಗಳೂರಿನಲ್ಲಿ, ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ . ಪಿ.ಎಸ್ ಯಡಪಡಿತ್ತಾಯರು ಚಾಲನೆ ನೀಡಲಿದ್ದಾರೆ

ಸ್ವಾಮಿ ವಿವೇಕಾನಂದರ 157ನೇ ಜಯಂತಿ ಮತ್ತು ರಾಷ್ಟ್ರೀಯ ಯುವ ದಿನದ ಅಂಗವಾಗಿ  ಅಭಿಯಾನಕ್ಕೆ ಚಾಲನೆ ದೊರೆಯಲಿದೆ. ಯುವಕ-ಯುವತಿಯರು ಸ್ವಾಮಿ ವಿವೇಕಾನಂದರು ಯುವಜನರಿಗೆ ನೀಡಿದ ‘ಉತ್ತಮನಾಗು-ಉಪಕಾರಿಯಾಗು’ ಎಂಬ ಸಂದೇಶವನ್ನು ತಾವು ಪಾಲನೆ ಮಾಡುವ ಸಂಕಲ್ಪ ತೊಡಲಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

 

ಜನವರಿ 12, 2020 ರಿಂದ 26 ಜನವರಿ 2020 ರವರೆಗೆ 2 ವಾರ ನಡೆಯಲಿರುವ ಈ ಬೃಹತ್ ಯುವ ಅಭಿಯಾನದಲ್ಲಿ ಸುಮಾರು 6 ಲಕ್‍ಷ ಯುವಕ-ಯುವತಿಯರು ಭಾಗವಹಿಸಲಿದ್ದಾರೆ.


ಸಾಮಾಜಿಕ ಸಂಸ್ಥೆ ‘ಸಮರ್ಥ ಭಾರತ’ ಈ ಯುವ ಅಭಿಯಾನವನ್ನು ಆಯೋಜಿಸಿದೆ.
ಕಾಲೇಜು ವಿದ್ಯಾರ್ಥಿಗಳು, ಯುವ ಉದ್ಯೋಗಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ತಮ್ಮ ವೈಯಕ್ತಿಕ ಜೀವನದಲ್ಲಿ ಉತ್ತಮಗುಣಸ್ವಾಭಾವಗಳನ್ನು ಮೈಗೂಡಿಸುವುದರ ಜತೆಗೆ ಸಾಮಾಜಿಕವಾಗಿ ಉಪಯೋಗವಾಗುವ ಸೇವಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವುದು ಈ ಅಭಿಯಾನದ ಉದ್ದೇಶ.

ಹೆಚ್ಚಿನ ಯುವ ಜನತೆಯನ್ನು ಸ್ಪೂರ್ತಿದಾಯಕ ಕಾರ್ಯಗಳಿಗೆ ಪ್ರೇರೇಪಿಸಿ ಈ ಮೂಲಕ ಅನೇಕ ಇತರರಿಗೆ ಆದರ್ಶ ವ್ಯಕ್ತಿಗಳಾಗುವ ಮೂಲಕ “ಉತ್ತಮ-ಉಪಕಾರಿಯಾಗು” ಎಂಬ ಪರಂಪರೆಯನ್ನು ನಿರ್ಮಿಸುವ ಆಶಯವನ್ನು ಈ ಅಭಿಯಾನ ಹೊಂದಿದೆ.

ಈ ಸಂದೇಶವು ಹೆಚ್ಚಿನ ಯುವ ಜನತೆಗೆ ತಲುಪಲು ತಂತ್ರಜ್ಞಾನಾಧಾರಿತ ವೇದಿಕೆಗಳಾದ ಸಮರ್ಥ ಭಾರತ ವೆಬ್‍ಸೈಟ್, ಸಾಮಾಜಿಕ ಜಾಲತಾಣಗಳು, ವಾಟ್ಸಪ್ ಮತ್ತು ಎಸ್‍ಎಮ್‍ಎಸ್ ಗಳನ್ನು ಬಳಸುವ ಮೂಲಕ #ಃeಉooಜಆoಉooಜ ಅಭಿಯಾನದ ಪ್ರಚಾರ ನಡೆಸಲಾಗುತ್ತಿದೆ.

ಇದಲ್ಲದೇ ಈ ವೇದಿಕೆಗಳು ಸ್ಪೂರ್ತಿದಾಯಕ ಅನುಭವಗಳನ್ನು ಹಂಚಿಕೊಳ್ಳಲೂ ಲಭ್ಯವಿರುತ್ತದೆ.

ಈ ವರ್ಷ ಅಭಿಯಾನವು ವೈಯಕ್ತಿಕ ಹಾಗೂ ಸಾಮಾಜಿಕ ಜೀವನಕ್ಕೆ ಸಂಬಂಧಪಟ್ಟ ಮೂರು ವಿಷಯಗಳ ಕುರಿತು ಜಾಗೃತಿಯನ್ನು ಮೂಡಿಸಿ, ಯುವಜನರು ಸಾಮಾಜಿಕವಾಗಿ ಉಪಯೋಗವಾಗುವ ಸೇವಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದೆ.
1. ಜಲ ಸಂರಕ್ಷಣೆ 
2. ಆರೋಗ್ಯಕರ ಆಹಾರ ಪದ್ಧತಿ 
3. ಎಲ್ಲರನ್ನೂ ಗೌರವಿಸಿ 

ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ:
ವಿಷಯ:-
1. 21ನೇ ಶತಮಾನದ ಯುವಜನತೆಗೆ ಸ್ವಾಮಿ ವಿವೇಕಾನಂದರ ಸಂದೇಶ
2. ಸ್ವಾಮಿ ವಿವೇಕಾನಂದರ ವಿಚಾರ ಹಾಗೂ ರಾಷ್ಟ್ರೀಯತೆ
3. ಮಹಿಳೆ: ಸ್ವಾಮಿ ವಿವೇಕಾನಂದರ ಪರಿಕಲ್ಪನೆ
ಪದವಿ ಯಾ ತತ್ಸಮಾನ, ಸ್ನಾತಕೋತ್ತರ ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
 ಬಹುಮಾನ
ಪ್ರಥಮ: ರೂ. 10,000 ಮತ್ತು ಪ್ರಮಾಣ ಪತ್ರ
ದ್ವಿತೀಯ: ರೂ. 7,500 ಮತ್ತು ಪ್ರಮಾಣ ಪತ್ರ
ತೃತೀಯ: ರೂ. 5,000 ಮತ್ತು ಪ್ರಮಾಣ ಪತ್ರ
ಮತ್ತು ತಲಾ ರೂ. 1,000 ದಂತೆ 20 ಸಮಾಧಾನಕರ ಬಹುಮಾನಗಳು
 ಮೇಲೆ ತಿಳಿಸಿದ ವಿಷಯಗಳ ಪೈಕಿ ಯಾವುದಾದರೂ ಒಂದು ವಿಷಯದ ಕುರಿತು ಕನ್ನಡ ಅಥವಾ ಇಂಗ್ಲೀಷ್ ಭಾಷೆಯಲ್ಲಿ 2500 ಪದಗಳ ಮಿತಿಯಲ್ಲಿ ಪ್ರಬಂಧವನ್ನು ಸ್ವಹಸ್ತಾಕ್ಷರದಲ್ಲಿ ಬರೆದು ಈ ಕೆಳಗಿನ ವಿಳಾಸಕ್ಕೆ ಜನವರಿ 31, 2020ರ ಒಳಗಾಗಿ ಕಳುಹಿಸಿ ಕೊಡಬೇಕಾಗಿ ವಿನಂತಿ.

ಮಂಗಳೂರಿನಲ್ಲಿ ಅಭಿಯಾನಕ್ಕೆ ಚಾಲನೆ:-
ಜನವರಿ 17, 2020 ರಂದು ಈ ಅಭಿಯಾನಕ್ಕೆ ಮಂಗಳೂರು ನಗರದಲ್ಲಿ ಚಾಲನೆ ದೊರೆಯಲಿದೆ. ಬೆಳಗ್ಗೆ 10ಗಂಟೆಗೆ ಮಂಗಳೂರಿನ ವಿಕಾಸ್ ಪದವಿ ಕಾಲೇಜಿನಲ್ಲಿ ಈ ಅಭಿಯಾನಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಪೆÇ್ರೀ. ಪಿ. ಎಸ್ ಯಡಪಡಿತ್ತಾಯ ಮತ್ತು ಕನ್ನಡ ಚಿತ್ರರಂಗದ ಖ್ಯಾತ ನಟರಾದ ವಿಜಯ ರಾಘವೇಂದ್ರ. (ಚಿನ್ನಾರಿ ಮುತ್ತ ಖ್ಯಾತಿಯ) ಚಾಲನೆ ನೀಡಲಿದ್ದಾರೆ. ತುಳು ಚಿತ್ರರಂಗದ ನಟರಾದ ಅರ್ಜುನ್ ಕಾಪಿಕಾಡ್, ಉಧ್ಯಮಿ ಸುನಿಲ್ ಆಚಾರ್ಯ ಭಾಗವಹಿಸಲಿದ್ದಾರೆ. ಉಪನ್ಯಾಸಕಿ ಅಕ್ಷಯ ಗೋಖಲೆ ಮುಖ್ಯ ಭಾಷಣ ಮಾಡಲಿದ್ದಾರೆ ಮತ್ತು ವಿಕಾಸ್ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಕೃಷ್ಣ ಪಾಲೆಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸಮರ್ಥ ಭಾರತದ ಪ್ರಕಟಣೆಯಲ್ಲಿ ಶ್ರೀ ರಾಘವೇಂದ್ರ ಭಟ್, ಸಾಕ್ಷತ್ ಶೆಟ್ಟಿ, ಅಕ್ಷಯ್ ಆಳ್ವ ಸುಮನ್ ರಾಜ್ ತಿಳಿಸಿದ್ದಾರೆ.