Thursday, May 14, 2026
ಸುದ್ದಿ

ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿ ಉರಿದ ಮಾರುತಿ 800 ಕಾರು-ಕಹಳೆ ನ್ಯೂಸ್

ಶಿರಾಡಿ: ಮಾರುತಿ 800 ಕಾರೊಂದು ಆಕಸ್ಮಿಕವಾಗಿ ಬೆಂಕಿ ಹಿಡಿದು ಹೊತ್ತಿ ಉರಿದಿದ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶೀರಾಡಿ ಗ್ರಾಮದ ಕೊಡ್ಡೇಲು ಎಂಬಲ್ಲಿ ನಡೆದಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಡಬ ತಾಲೂಕು ರಾಮಕುಂಜ ನಿವಾಸಿ ಪ್ರವೀಣ್ ಡಿಸೋಜ ರವರು ಬೆಂಗಳೂರಿನಿಂದ ರಾಮಕುಂಜದ ತನ್ನ ಮನೆಗೆ ಬರುತ್ತಿದ್ದ ವೇಳೆ ಘಟನೆ ಸಂಭವಿಸಿದೆ.

ವಾಹನದಲ್ಲಿ ಹೊಗೆ ಆವರಿಸಿರುವುದನ್ನು ಗಮನಿಸಿದ ಪ್ರವೀಣ್ ಕಾರಿನಿಂದ ಹೊರಗಡೆ ಇಳಿದ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಸಂಪೂರ್ಣ ನಾಶವಾಗಿದ್ದು, ನೆಲ್ಯಾಡಿ ಹೊರ ಠಾಣಾ ಪೆÇೀಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ.