Saturday, July 25, 2026
ಸುದ್ದಿ

ರಸ್ತೆ ವಿಭಜಕಕ್ಕೆ ನುಗ್ಗಿ ಆಟೋ, ಕ್ಯಾಂಟರ್ ಗೆ ಡಿಕ್ಕಿ ಹೊಡೆದ ಸಿಎಂ ಬೆಂಗಾವಲು ವಾಹನ: ಚಾಲಕರಿಗೆ ಗಾಯ – ಕಹಳೆ ನ್ಯೂಸ್

ಬೆಂಗಳೂರು: ಸಿಎಂ ಬಿ ಎಸ್ ಯಡಿಯೂರಪ್ಪ ಬೆಂಗಾವಲು ವಾಹನ ಪ್ರಯಾಣದ ಮಧ್ಯೆ ಬೇರೆ ಎರಡು ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ನಿನ್ನೆ ಬೆಂಗಳೂರಿನ ಯಶವಂತಪುರ ಮೇಲ್ಸೇತುವೆ ಬಳಿ ನಡೆಯಿತು. ಘಟನೆಯಲ್ಲಿ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

 

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ತುಮಕೂರಿಗೆ ಇದೇ ತಿಂಗಳ 8ರಂದು ಪ್ರಧಾನಿ ಆಗಮಿಸಲಿರುವ ಹಿನ್ನಲೆಯಲ್ಲಿ ಅಲ್ಲಿ ಮಾಡಿರುವ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಲು ಮುಖ್ಯಮಂತ್ರಿ ಯಡಿಯೂರಪ್ಪ ಹೊರಟಿದ್ದರು. ಯಶವಂತಪುರ ಮೇಲ್ಸೇತುವೆ ಬಳಿ ಬೆಳಗ್ಗೆ 11 ಗಂಟೆಗೆ ಹೋಗುತ್ತಿರಬೇಕಾದರೆ ಹಿಂದಿನಿಂದ ಬರುತ್ತಿದ್ದ ಬೆಂಗಾವಲು ಪಡೆ ಕಾರಿನ ಚಾಲಕ ವಿನಯ್ ಕುಮಾರ್ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದರು.

 

ಎಸ್ ಯುವಿ ಕಾರು ವಿಭಜಕಕ್ಕೆ ಹೊಡೆದು ನುಗ್ಗಿ ಎದುರಿನಿಂದ ಬರುತ್ತಿದ್ದ ಆಟೋ ರಿಕ್ಷಾ ಮತ್ತು ಕ್ಯಾಂಟರ್ ಗೆ ಡಿಕ್ಕಿ ಹೊಡೆಯಿತು. ಅಪಘಾತದಲ್ಲಿ ಕಾರು ಚಾಲಕ, ಆಟೋ ಚಾಲಕ ಮತ್ತು ಕ್ಯಾಂಟರ್ ಚಾಲಕರಿಗೆ ಗಾಯಗಳಾಗಿದೆ. ಕಾರಿನ ಮುಂದಿನ ಭಾಗ ಸಂಪೂರ್ಣ ಹಾನಿಯಾಗಿದೆ. ಈ ಘಟನೆ ನಡೆಯುವಾಗ ಸಿಎಂ ಅವರ ಕಾರ್ಯದರ್ಶಿ ಅವರ ಕಾರಿನಲ್ಲಿಯೇ ಇದ್ದರು. ವೇಗದ ಚಾಲನೆಯಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಯಶವಂತಪುರ ಸಂಚಾರಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.