Friday, May 15, 2026
ಸುದ್ದಿ

Breaking News : ರಾಷ್ಟ್ರೀಯವಾದಿ, ಹಿಂದುತ್ವವೇ ಉಸಿರಾದ ಶ್ರೇಷ್ಠ ಸಂತ ; ರಾಮ ಮಂದಿರದ ಕನಸುಕಂಡ ಮಾಹಾ ತಪಸ್ವಿ ಪೇಜಾವರ ಶ್ರೀಪಾದರು ಇನ್ನು ನೆನಪು ಮಾತ್ರ – ಕಹಳೆ ನ್ಯೂಸ್

ಉಡುಪಿ : ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ನಾಡುಕಂಡ ಶ್ರೇಷ್ಠ ಸಂತ ವಿಶೇಶ್ವರತೀರ್ಥ ಶ್ರೀಗಳು ಇಹಲೋಕದ ಯಾತ್ರೆ ಮುಗಿಸಿದ್ದಾರೆ.

ಮಣಿಪಾಲ: ಈ ಶತಮಾನ ಕಂಡ ಲೋಕಮಾನ್ಯ ಸಂತ ಉಡುಪಿ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಶ್ರೀಪಾದಂಗಳವರು ದೇಹತ್ಯಾಗ ಮಾಡಿದ್ದು, ಶ್ರೀಕೃಷ್ಣನಲ್ಲಿ ಲೀನರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ಒಂದು ವಾರದ ಹಿಂದೆ ತೀವ್ರ ಅನಾರೋಗ್ಯದಿಂದಾಗಿ ಶ್ರೀಗಳನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೇ ಇಂದು ನಸುಕಿನಲ್ಲಿ ಶ್ರೀಗಳು ಹರಿಪಾದ ಸೇರಿದ್ದಾರೆ.

ಮೂಲಗಳ ಮಾಹಿತಿಯಂತೆ ಮುಂಜಾನೆ 7.30ರ ವೇಳೆಗೆ ಉಡುಪಿ ಶ್ರೀಕೃಷ್ಣ ಮಠದ ರಥ ಬೀದಿಗೆ ಶ್ರೀಗಳ ಪಾರ್ಥಿವ ಶರೀರವನ್ನು ತರಲಾಗುತ್ತದೆ. ಇಲ್ಲಿ, ಗಣ್ಯರು ಹಾಗೂ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಆನಂತರ ವಿಶೇಷ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಸ್ಥಳಾಂತರ ಮಾಡಿ, ವಿದ್ಯಾಪೀಠದಲ್ಲಿ ಶ್ರೀಗಳ ಬೃಂದಾವನ ಮಾಡಲಾಗುತ್ತದೆ ಎಂದು ಹೇಳಲಾಗಿದೆ.