Friday, May 15, 2026
ಸುದ್ದಿ

ಪೇಜಾವರ ಮಠ ತಲುಪಿದ ಶ್ರೀಗಳು: ಮಠದ ಸುತ್ತ ಪೊಲೀಸ್ ಸರ್ಪಗಾವಲು, ರಥಬೀದಿಯಲ್ಲಿ ಮಾಧ್ಯಮ ಚಿತ್ರೀಕರಣಕ್ಕೆ ನಿರ್ಬಂಧ – ಕಹಳೆ ನ್ಯೂಸ್

ಉಡುಪಿ: ಮಣಿಪಾಲ್​ ಆಸ್ಪತ್ರೆಯಿಂದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರನ್ನು ಪೇಜಾವರ ಮಠಕ್ಕೆ ಸ್ಥಳಾಂತರಿಸಲಾಗಿದ್ದು, ಉಡುಪಿ ಮಠದ ಸುತ್ತಮುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.

ಇಂದು ಬೆಳಗ್ಗೆ 6.55ಕ್ಕೆ ಆಂಬ್ಯುಲೆನ್ಸ್ ಮೂಲಕ ಶ್ರೀಗಳನ್ನು ವೈದ್ಯರ ತಂಡ ಮಠಕ್ಕೆ ಕರೆತಂದಿದೆ. ಶ್ರೀಗಳಿಗೆ ಚಿಕಿತ್ಸೆ ಮುಂದುವರಿದಿದ್ದು, ಸಂಪೂರ್ಣ ವೈದ್ಯಕೀಯ ವ್ಯವಸ್ಥೆಯೊಂದಿಗೆ‌ ಮಠದಲ್ಲಿ ಇರಿಸಲಾಗಿದೆ. ವೈದ್ಯರು ನರ್ಸ್​ಗಳು ಜತೆಗಿದ್ದಾರೆ. ‌ಪರಿಸ್ಥಿತಿ ಕ್ಷೀಣ ಆಗುತ್ತಿದೆ. ಕೊನೇ ಕ್ಷಣವನ್ನು ಮಠದಲ್ಲಿ ಕಳೆಯಬೇಕು ಎನ್ನುವ ಸ್ವಾಮೀಜಿ ಇಚ್ಛೆಯಂತೆ ಮಠಕ್ಕೆ ಕರೆತರಲಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಮಾಹಿತಿ ನೀಡಿದರು. ಈ ವೇಳೆ ಶಾಸಕ ರಘುಪತಿ ಭಟ್ ಹಾಗೂ ಉಮಾಭಾರತಿ ಸಹ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ರಥಬೀದಿಯಲ್ಲಿ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಆದರೆ, ಶ್ರೀಗಳ ದರ್ಶನಕ್ಕಾಗಿ ಭಕ್ತರು ಹಾತೊರೆಯುತ್ತಿದ್ದು, ಎಲ್ಲೆಡೆ ಮೌನದ ವಾತಾವರಣ ಆವರಿಸಿದೆ.

ಧಾರ್ಮಿಕ ವಿಧಿವಿಧಾನಗಳನ್ನು ಚಿತ್ರೀಕರಿಸಬೇಡಿ
ಮಠದ ರಥಬೀದಿಯಲ್ಲಿ ಮಾಧ್ಯಮ ಚಿತ್ರೀಕರಣಕ್ಕೆ ನಿರ್ಬಂಧ ಹೇರಲಾಗಿದೆ. ಧಾರ್ಮಿಕ ವಿಧಿವಿಧಾನಗಳನ್ನು ಚಿತ್ರೀಕರಿಸದಂತೆ ಪೇಜಾವರ ಮಠದಿಂದ ಸೂಚನೆ ರವಾನೆಯಾಗಿದೆ. ಹೀಗಾಗಿ ಮಾಧ್ಯಮಗಳು ರಥಬೀದಿಯಿಂದ ಹೊರಗಿರುವಂತೆ ಪೊಲೀಸರ ತಾಕೀತು ಮಾಡಿದ್ದಾರೆ.