Thursday, May 14, 2026
ಸುದ್ದಿ

ಕ್ರಿಸ್ಮಸ್ ಸಂಭ್ರಮದಲ್ಲಿ ರಾಮಾಯಣಕ್ಕೆ ಅವಮಾನ : ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮಂಗಳೂರಿನ ಪೆÇಲೀಸ್ ಕಮಿಷನರ್‍ಗೆ ದೂರು – ಕಹಳೆ ನ್ಯೂಸ್

ಮಂಗಳೂರು :ರಾಮಾಯಣದ ಪಾತ್ರದ ಮೂಲಕ ಪ್ರಭು ಶ್ರೀರಾಮ, ಮಾರುತಿ ಮತ್ತು ಸೀತಾಮಾತೆಯ ಅಪಮಾನ ಮಾಡುವ ಮತ್ತು ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮಂಗಳೂರಿನ ಪೆÇಲೀಸ ಕಮಿಷನರ್‍ಗೆ ದೂರನ್ನ ನೀಡಲಾಯಿತು.


ಕಿನ್ನಿಗೊಳಿಯಲ್ಲಿ ಕ್ರಿಸ್ಮಸ್ ಸಮಯದಲ್ಲಿ ರಾಮಾಯಣದ ಒಂದು ದೃಶ್ಯದ ನಾಟಕವನ್ನು ಮಾಡಿ ಅದರಲ್ಲಿ ಅಶ್ಲೀಲ, ಅಸಭ್ಯವಾಗಿ ಶ್ರೀರಾಮ, ಮಾರುತಿ, ಸೀತೆಯ ಬಗ್ಗೆ ಸಂಭಾಷಣೆಯನ್ನು ಮಾಡಿ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ್ದಾರೆ. ಈ ವಿಡಿಯೋವನ್ನ ಸಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದೀಗ ಈ ವಿಡಿಯೋ ವಿಚಾರಕ್ಕೆ ಹಿಂದೂ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ದೃಶ್ಯವನ್ನು ಪರಿಶೀಲಿಸಿದರೆ ಇದು ಉದ್ದೇಶಪೂರ್ವಕವಾಗಿ ಹಿಂದೂ ದೇವತೆಗಳನ್ನು ಅಪಮಾನ ಮಾಡಲು ಮಾಡಿರುವ ಷಡ್ಯಂತ್ರ್ಯವಾಗಿದೆ. ಹಾಗಾಗಿ ಇದು ಗಂಬೀರ ವಿಷಯವಾಗಿದೆ. ಈ ರೀತಿಯಲ್ಲಿ ಧಾರ್ಮಿಕ ಭಾವನೆಗೆ ನೋವುಂಟು ಮಾಡುವುದು ಭಾರತದ ದಂಡ ಸಂಹೀತೆ 295, 298, 295ಂ ಪ್ರಕಾರ ಗಂಭೀರ ಅಪರಾಧವಾಗಿದೆ. ಇಂದು ಇಡೀ ದಕ್ಷಿಣ ಕನ್ನಡ ಜಿಲ್ಲೆ ಕೋಮು ದಳ್ಳುರಿಯಿಂದ ಹೊತ್ತು ಉರಿಯುತ್ತಿದ್ದು, ಇಂತಹ ಸಮಯದಲ್ಲಿ ಮತ್ತೊಮ್ಮೆ ಹಿಂದೂಗಳ ಧಾರ್ಮಿಕ ಭಾವನಗೆ ನೋವುಂಟು ಮಾಡುವ ಘಟನೆ ನಡೆದಿರುವುದು ವಿμÁಧನೀಯವಾಗಿದೆ.

ಇದರ ವಿರುದ್ಧ ಮಂಗಳೂರಿನ ಪೆÇಲೀಸ ಕಮಿಷನರ್ ಇವರಿಗೆ ಮನವಿ ಸಲ್ಲಿಸಲಾಯಿತು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಿಂದೂ ಸಂಘಟನೆಗಳ ವತಿಯಿಂದ ಒತ್ತಾಯಿಸಲಾಯಿತು.


ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ ಚಂದ್ರ ಮೊಗೇರ್, ಶ್ರೀ ಪ್ರಭಾಕರ್ ನಾಯಕ, ವಿಶ್ವಹಿಂದೂ ಪರಿಷಟ್ಟಿನ ಶ್ರೀ ಮಧುಸೂದನ ಯಾರ್, ಶ್ರೀರಾಮಸೇನೆಯ ಶ್ರೀ ವೆಂಕಟೇಶ್ವರ ಪಡಿಯಾರ, ಶ್ರೀ ಹರೀಶ ,ಶ್ರೀ ಹರೀಶ್ ಬೊಕ್ಕ ಪಟ್ನ, ಶ್ರೀ ಸುರೇಶ್ ಅತ್ತಾವರ, ಶ್ರೀ ಪ್ರವೀಣ್ ಸುಜೀರ್, ಸೌ ನವಪ್ರಭ,ಸೌ. ಲೀಲಾವತಿ ನಾಯಕ್ ಮುಂತಾದವರು ಉಪಸ್ಥಿತರಿದ್ದರು.