Thursday, May 14, 2026
ಸುದ್ದಿ

ಲಾಟರಿ ಡ್ರಾದ ಲೈವ್‌ ಕವರೇಜ್ ಮಾಡುತ್ತಿದ್ದ ನಿರೂಪಕಿಗೇ ಒಲಿಯಿತು ʼಅದೃಷ್ಟʼ-ಕಹಳೆ ನ್ಯೂಸ್

ಲಾಟರಿ ವಿಜೇತರ ಘೋಷಣೆಯನ್ನು ಲೈವ್‌ ಕವರೇಜ್ ಮಾಡುತ್ತಿದ್ದ ಟಿವಿ ವರದಿಗಾರ್ತಿಯೇ ಖುದ್ದು ಲಾಟರಿ ಗೆದ್ದ ಘಟನೆಯೊಂದು ಸ್ಪೇನ್‌ ನಲ್ಲಿ ನಡೆದಿದೆ.

ಇಲ್ಲಿನ ಆರ್‌ಟಿವಿ ಎಂಬ ವಾಹಿನಿಯ ವರದಿಗಾರ್ತಿ ನಟಾಲಿಯಾ ಎಂಬಾಕೆ, ಸ್ಪಾನಿಷ್‌ ಕ್ರಿಸ್‌ಮಸ್‌ ಲಾಟರಿಯ ಲೈವ್‌ ಕವರೇಜ್‌ನಲ್ಲಿ ನಿರತರಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಇದೇ ಲಾಟರಿ ಡ್ರಾನಲ್ಲಿ ತಾವು ಗೆದ್ದ ವಿಚಾರ ಕೇಳಿ ಸಂತಸಗೊಂಡ ನಟಾಲಿಯಾ, “ನಾಳೆ ನಾನು ಕೆಲಸ ಮಾಡುವುದಿಲ್ಲ” ಎಂದು ಲೈವ್‌ ಕಾರ್ಯಕ್ರಮದಲ್ಲೇ ಉದ್ಘರಿಸಿಬಿಟ್ಟಿದ್ದಾರೆ.

ಲಾಟರಿಯಲ್ಲಿ ಮೊದಲ ಬಹುಮಾನ ಗೆಲ್ಲದೇ ಇದ್ದರೂ ಸಹ ನಟಾಲಿಯಾ 5000 ಯೂರೋಗಳನ್ನು ಗೆಲ್ಲಲು ಸಫಲರಾಗಿದ್ದಾರೆ.

ಡಿಸೆಂಬರ್‌ 22ರಂದು ಹಮ್ಮಿಕೊಳ್ಳಲಾದ ಲಾಟರಿ ಡ್ರಾ ಕಾರ್ಯಕ್ರಮವನ್ನು ನಟಾಲಿಯಾ ನಿರೂಪಿಸುತ್ತಿದ್ದರು. ವಿಡಿಯೋ ವೈರಲ್ ಆಗಿದ್ದು, 23 ಲಕ್ಷ ವೀವ್ಸ್‌ಗಳನ್ನು ಪಡೆದಿದ್ದು, 13,700 ಲೈಕ್‌ಗಳನ್ನು ಗಿಟ್ಟಿಸಿದೆ.