
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಕೆಲಸ ಖಾಲಿ ಇದೆ. ಹಲವು ಸಹಾಯಕ ಹುದ್ದೆಗಳಿಗೆ ಆನ್ ಲೈನ್ ನಲ್ಲಿ ಅರ್ಜಿ ಆಹ್ವಾನಿಸಲಾಗಿದ್ದು, ತನ್ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಲು ಸೂಚಿಸಿದೆ.
rbi.gov.in ನಲ್ಲಿ 2020ರ ಜ.16ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಿದೆ.
ಸಹಾಯಕ ಹುದ್ದೆಗಳು ಸೇರಿದಂತೆ ಒಟ್ಟು 926 ಹುದ್ದೆಗಳು ಖಾಲಿ ಇವೆ. 2020ರ ಫೆಬ್ರವರಿ 14 ಮತ್ತು 15 ರಂದು ಆನ್‌ಲೈನ್ ಪೂರ್ವಭಾವಿ ಪರೀಕ್ಷೆಯನ್ನು ಏರ್ಪಡಿಸಲಾಗಿದೆ.
ಅಂತಿಮ ಪರೀಕ್ಷೆ 2020 ರ ಮಾರ್ಚ್ ನಲ್ಲಿ ನಿಗದಿ ಮಾಡಲಾಗಿದೆ. ಆದರೆ ದಿನಾಂಕ ಬದಲಾಗುವ ಸಾಧ್ಯತೆ ಇದೆ ಎಂದು ಆರ್.ಬಿ.ಐ. ತಿಳಿಸಿದೆ.
ಸಾಮಾನ್ಯ ಒಬಿಸಿ ಹಾಗೂ ಇಡಬ್ಲ್ಯೂಎಸ್ ವರ್ಗಕ್ಕೆ ಆನ್‌ಲೈನ್ ಅರ್ಜಿ ಶುಲ್ಕವಾಗಿ 450 ರೂಪಾಯಿ ನಿಗದಿಪಡಿಸಲಾಗಿದೆ. ಮೀಸಲು ವರ್ಗಕ್ಕೆ 50 ರೂಪಾಯಿ ನಿಗದಿಯಾಗಿದೆ. ಅರ್ಜಿ ಶುಲ್ಕವನ್ನು ಆನ್ ಲೈನ್ ನಲ್ಲೇ ಪಾವತಿ ಮಾಡಬೇಕಿದೆ. 20 ರಿಂದ 28 ವರ್ಷದವರು ಅಂದರೆ, 1991ರ ಡಿ.2 ರ ನಂತರ ಹಾಗೂ 1999 ಡಿ. 1 ರೊಳಗೆ ಹುಟ್ಟಿದವರು ಅರ್ಜಿ ಸಲ್ಲಿಸಲು ಅರ್ಹರು ಎಂದು ಹೇಳಿದೆ.
ಯಾವುದೇ ಪದವಿಯಲ್ಲಿ ಶೇಕಡ 50 ಅಂಕ ಗಳಿಸಬೇಕಿದೆ. (ಎಸ್ಸಿ/ಎಸ್ಟಿ, ಇಡಬ್ಲ್ಯುಎಸ್ ಅಭ್ಯರ್ಥಿಗಳು ಪಾಸಾಗಿದ್ದರೆ ಸಾಕು). ಹೆಚ್ಚಿನ ಮಾಹಿತಿಗೆ ಆರ್.ಬಿ.ಐ. ವೆಬ್ ಸೈಟ್ ಅನ್ನು ನೋಡಿ.









