Thursday, May 14, 2026
ಸುದ್ದಿ

ಪಶುವೈದ್ಯೆ ಮೇಲಿನ `ಹತ್ಯಾಚಾರ’ ಪ್ರಕರಣ : ನಾಲ್ವರು ಅರೋಪಿಗಳ ಶವ ಕುಟುಂಬಕ್ಕೆ ಹಸ್ತಾಂತರ-ಕಹಳೆ ನ್ಯೂಸ್

ಹೈದರಾಬಾದ್ : ಪಶುವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಎನ್ ಕೌಂಟರ್ ಆಗಿದ್ದ ನಾಲ್ವರು ಆರೋಪಿಗಳ ಮೃತದೇಹಗಳನ್ನು ಕುಟುಂಬಗಳಿಗೆ ಹಸ್ತಾಂತರ ಮಾಡಲಾಗಿದೆ.

ದೆಹಲಿ ಹೈಕೋರ್ಟ್ ಆದೇಶದ ಮೇರೆಗೆ 2 ನೇ ಬಾರಿಗೆ ಆರೋಪಿಗಳ ಶವ ಪರೀಕ್ಷೆ ನಡೆಸಿತ್ತು. ಬಳಿಕ ನಾಲ್ವರು ಆರೋಪಿಗಳ ಮೃತದೇಹಗಳನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ನವೆಂಬರ್ 28 ರಂದು ಪಶುವೈದ್ಯೆಯನ್ನು ಅತ್ಯಾಚಾರ ಮಾಡಿ ಬಳಿಕ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದರು. ಬಳಿಕ ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು ಡಿಸೆಂಬರ್ 6 ರಂದು ನಾಲ್ವರು ಆರೋಪಿಗಳನ್ನು ಎನ್ ಕೌಂಟರ್ ಮಾಡಿದ್ದರು.