Thursday, May 14, 2026
ಸುದ್ದಿ

ಕರ್ನಾಟಕದ ನೂತನ ಪೊಲೀಸ್ ಮಹಾ ನಿರ್ದೇಶಕರು ಯಾರು-ಕಹಳೆ ನ್ಯೂಸ್

ಬೆಂಗಳೂರು, ಡಿಸೆಂಬರ್ 19: ಕರ್ನಾಟಕದ ಮೊದಲ ಮಹಿಳಾ ಡಿಜಿ & ಐಜಿಪಿ ನೀಲಮಣಿ ಎನ್. ರಾಜು ಡಿಸೆಂಬರ್ 31ರಂದು ನಿವೃತ್ತರಾಗಲಿದ್ದಾರೆ. ಹೊಸ ಪೊಲೀಸ್ ಮಹಾ ನಿರ್ದೇಶಕರು ಯಾರು? ಎಂಬ ಚರ್ಚೆ ಆರಂಭವಾಗಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕರ್ನಾಟಕ ಸರ್ಕಾರ ಸೇವಾ ಹಿರಿತನದ ಆಧಾರದ ಮೇಲೆ ಮೂವರ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಮೂವರು ಹಿರಿಯ ಐಪಿಎಸ್ ಅಧಿಕಾರಿಗಳಲ್ಲಿ ಯಾರು ನೂತನ ಡಿಜಿ & ಐಜಿಪಿಯಾಗಲಿದ್ದಾರೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟಿಸಿದರೆ ಜೈಲಿಗೆ: ಪೊಲೀಸ್ ಆಯುಕ್ತ

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಬುಧವಾರ ನೂತನ ಡಿಜಿ & ಐಜಿಪಿ ನೇಮಕ ಕುರಿತು ಸಭೆ ನಡೆಸಿದ್ದಾರೆ. ಶಂಕರ ಬಿದರಿ ನಿವೃತ್ತರಾದ ಬಳಿಕ ಸೇವಾ ಹಿರಿತನದ ಆಧಾರದ ಮೇಲೆ ಪೊಲೀಸ್ ಮಹಾ ನಿರ್ದೇಶಕರ ನೇಮಕವಾಗುತ್ತಿದೆ.

ಮಾಲ್‌ಗಳಲ್ಲಿ ಮೊಬೈಲ್ ನಂಬರ್ ಕೊಡಬೇಡಿ: ಪೊಲೀಸ್ ಆಯುಕ್ತ

ಯಾರ ಹೆಸರು ಶಿಫಾಸರು?: ಕರ್ನಾಟಕ ಸರ್ಕಾರ ಡಿಜಿ & ಐಜಿಪಿ ಹುದ್ದೆಗೆ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಎ. ಎಂ. ಪ್ರಸಾದ್, ಸಿಐಡಿ ಡಿಜಿಪಿ ಪ್ರವೀಣ್ ಸೂದ್ ಮತ್ತು ರಾಜ್ಯ ಪೊಲೀಸ್ ತರಬೇತಿ ವಿಭಾಗದ ಡಿಸಿಪಿ ಪದಮ್ ಕುಮಾರ್ ಗರ್ಗ್ ಹೆಸರನ್ನು ಶಿಫಾರಸು ಮಾಡಿದೆ.

ರಾಜ್ಯಕ್ಕೆ ಬಾಂಗ್ಲಾ ಮೂಲದ ಉಗ್ರರ ನುಸುಳುವಿಕೆ; ಕಠಿಣ ಕ್ರಮಕ್ಕೆ ಗೃಹ ಸಚಿವರ ಸೂಚನೆ

ಎ. ಎಂ. ಪ್ರಸಾದ್ 2020ರ ಅಕ್ಟೋಬರ್‌ನಲ್ಲಿ, ಪ್ರವೀಣ್ ಸೂರ್ 2024ರಲ್ಲಿ, 2020ರ ಏಪ್ರಿಲ್‌ನಲ್ಲಿ ಪದಮ್ ಕುಮಾರ್ ಗರ್ಗ್ ನಿವೃತ್ತಿ ಹೊಂದಲಿದ್ದಾರೆ. ಮೂವರು ಅಧಿಕಾರಿಗಳಲ್ಲಿ ರಾಜ್ಯ ಪೊಲೀಸ್ ಇಲಾಖೆಯ ಅತ್ಯುನ್ನತ ಸ್ಥಾನಕ್ಕೆ ಯಾರು ನೇಮಕವಾಗಲಿದ್ದಾರೆ? ಕಾದು ನೋಡಬೇಕು.