Thursday, May 14, 2026
ಸುದ್ದಿ

ಪೆರ್ಲಂಪಾಡಿ: ಮದುರ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಮುಕ್ತ ಕಬಡ್ಡಿ ಪಂದ್ಯಾಟ- ಕಹಳೆ ನ್ಯೂಸ್

ಪುತ್ತೂರು: ಮದುರ ಹಳೆ ವಿದ್ಯಾರ್ಥಿ ಸಂಘ ಸಬ್ಬಡ್ಕ, ದುಗ್ಗಳ ಇದರ ಆಶ್ರಯದಲ್ಲಿ ಸಂಘದ ಸ್ಥಾಪಕಾಧ್ಯಕ್ಷರಾದ ದಿ. ರಾಮಚಂದ್ರ ಗೌಡ ದುಗ್ಗಳ ಇವರ ಸ್ಮರಣಾರ್ಥದಲ್ಲಿ ಇದೆ ಬರುವ ಡಿಸೆಂಬರ್29 ನೇ ಆದಿತ್ಯವಾರದಂದು ಮುಕ್ತ ಕಬಡ್ಡಿ ಪಂದ್ಯಾಟವು ಬೆಳಿಗ್ಗೆ 9ಗಂಟೆಯಿಂದ ಪ್ರಾರಂಭವಾಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಪಂದ್ಯಾಟದ ಪ್ರಥಮ ಬಹುಮಾನವಾಗಿ ರೂ.10,000 ಮತ್ತು ಮದುರ ಟ್ರೋಫಿ, ದ್ವಿತೀಯ ಬಹುಮಾನವಾಗಿ ರೂ.7,000 ಮತ್ತು ಮದುರ ಟ್ರೋಫಿ ಹಾಗೂ ತೃತೀಯ ಬಹುಮಾನವಾಗಿ ರೂ.3,000 ಮತ್ತು ಮದುರ ಟ್ರೋಫಿ ಸೇರಿದಂತೆ ಉತ್ತಮ ದಾಳಿಗಾರ, ಹಿಡಿತಗಾರ, ಆಲ್ ರೌಂಡರ್ ಪ್ರಶಸ್ತಿ ನೀಡಲಾಗುತ್ತದೆ.