Thursday, May 14, 2026
ಸುದ್ದಿ

Breaking News : ಪುತ್ತೂರಿನಲ್ಲಿ ಖಾಸಗೀ ಬಾರಿನ ಬಳಿ ನಡೆದ ಕೊಲೆಯತ್ನ ಪ್ರಕರಣ ; ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದ ನ್ಯಾಯಾಲಯ – ಕಹಳೆ ನ್ಯೂಸ್

ಪುತ್ತೂರು : ನಗರದಲ್ಲಿ ನವೆಂಬರ್ ತಿಂಗಳಿನಲ್ಲಿ ರಾತ್ರಿ ಸುಮಾರು 8.30 ರ ಹೊತ್ತಿಗೆ ಖಾಸಗಿ ಬಾರ್ ನಲ್ಲಿ ಪಾರ್ಟಿ ಮಾಡಿ ಕುಡಿದ ಮತ್ತಿನಲ್ಲಿ ಗಲಾಟೆ ನಡೆಸಿದ ಪ್ರಕರಣ ವರದಿಯಾಗಿತ್ತು. ನಂತರ ಅದು ಕೊಲೆಯತ್ನ ಪ್ರಕರಣವಾಗಿ ಬದಲಾಗಿತ್ತು. ಈಗ ಈ ಪ್ರಕರಣದ ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ.

ಪರೇಶ್ ಶೆಟ್ಟಿ, ಸುರಕ್ಷನ್ ಶೆಟ್ಟಿ, ರಕ್ಷಿತ್ ಆರ್. ಹೆಗ್ಡೆ ಖಾಸಗೀ ಬಾರ್ ನಲ್ಲಿ ಪಾರ್ಟಿ ಮಾಡಿತ್ತಿದ್ದರು‌‌. ನಂತರ ಅದೇ ಸ್ಥಳಕ್ಕೆ ಆಗಮಿಸಿದ್ದ ರೌಡೀ ಶೀಟರ್ ಇಬ್ರಾಹಿಂ ಮತ್ತು ಆತನ ಸ್ನೇಹಿತರು ರಕ್ಷಿತ್ ಹೆಗಡೆ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಪುತ್ತೂರಿನ ಸರಕಾರಿ ಆಸ್ಪತ್ರೆ ನಂತರ ಮಂಗಳೂರಿನ ವೆಲ್ಲಾಕ್ , ನಂತರ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ದೂರು ನೀಡಿದ್ದರು. ಈ ದೂರಿನ ಆಧಾರಿ ಪೋಲೀಸರು ಇಬ್ರಾಹಿಂ / ಸುಲೇಮಾನ್ ಯಾನೆ ಇಬ್ಬಿ‌ (37 ), ಹಾಗೂ ಸಂಪ್ರೀತ್ ( 24 ) ರವರ ಮೇಲೆ ಭಾರತೀಯ ದಂಡ ಸಂಹಿತೆ 324 / 323 / 504/ 506/ 34 ಅಡಿ ಪ್ರಕರಣ ದಾಖಲಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ನಂತರ ಕಾರ್ಯಾಚರಣೆ ನಡೆಸಿದ ಪೋಲೀಸರು ಅಕ್ಷಯ್ ಕಲ್ಲೇಗ ( 22 ) ರನ್ನು ಬಂಧಿಸಿದ್ದರು. ನಂತರ 307 ರ ಅಡಿ ಕೊಲೆಯತ್ನ ಎಂಬಂತೆ ಪ್ರಕರಣ ದಾಖಲಿಸಿ ಆರೋಪಗಳನ್ನು ಜೈಲಿಗಟ್ಟಿದ್ದರು.

ಜಾಮೀನು ನೀಡಲು ಪ್ರಮುಖ ಕಾರಣ :

ಈ ಪ್ರಕರಣದಲ್ಲಿ ಗಾಯಾಳು ಆರಂಭದಲ್ಲಿ ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಮಂಗಳೂರು ವೆಲ್ಸಾಕ್ ಆಸ್ಪತ್ರೆಯಲ್ಲಿ ಹೊರ ರೋಗೊಯಾಗಿಯೇ ಚಿಕಿತ್ಸೆ ಪಡೆದು, ಎರಡು ದಿನಗಳ ನಂತರ ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಕೇಸು ದಾಖಲಿಸುತ್ತಾನೆ. ಅಲ್ಲದೆ, ಆರಂಭದಲ್ಲಿ ಕೊಲೆಯತ್ನದ ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲ, ನಂತರ ಆರೋಪಿತರನ್ನು ಬಂಧಿಸಿ ಕೊಲೆಯತ್ನದ ಪ್ರಕರಣವನ್ನು ಆಳವಡಿಸಿಕೊಳ್ಳಲಾಗಿತ್ತು. ಈ ಎಲ್ಲಾ ಅಂಶಗಳನ್ನು ಗಮನಿಸಿ ರುಡಾಲ್ಫ್ ಫಿರೇರ ಐದನೇ ಹೆಚ್ಚುವರಿ ಸತ್ರ ನ್ಯಾಯಾಧೀಶರು ಕೊಲೆಯತ್ನದ ಈ ಪ್ರಕರಣದಲ್ಲಿ ಜಾಮೀನನ್ನು ಮಂಜೂರು ಮಾಡಿದ್ದಾರೆ.

ಆರೋಪಿಗಳ ಪರ ನ್ಯಾಯವಾದಿ ಮಹೇಶ್ ಕಜೆ ವಾದಿಸಿದರು.