Saturday, May 9, 2026
ಸುದ್ದಿ

ರಸ್ತೆ ಗುಂಡಿಗೆ ವಾಹನ ಸವಾರ ಬಲಿ: ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಾನವ ಹಕ್ಕು ಆಯೋಗ-ಕಹಳೆ ನ್ಯೂಸ್

ಕೇರಳದಲ್ಲಿ ದ್ವಿಚಕ್ರ ವಾಹನ ಸವಾರ ರಸ್ತೆ ಗುಂಡಿಗೆ ಜೀವತೆತ್ತ ಪ್ರಕರಣವನ್ನು ಮಾನವ ಹಕ್ಕು ಆಯೋಗ ಗಂಭೀರವಾಗಿ ಪರಿಗಣಿಸಿದೆ.

ಕೊಚ್ಚಿಯಲ್ಲಿ ಯದುಲಾಲ್ ಎಂಬ 23 ವರ್ಷದ ಯುವಕ ರಸ್ತೆಗುಂಡಿಯಿಂದಾಗಿ ಅಪಘಾತಕ್ಕೊಳಗಾಗಿ ಮೃತಪಟ್ಟಿದ್ದ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ರಸ್ತೆಗುಂಡಿ ಇದ್ದಿದ್ದರಿಂದ ಆತ ಸಂಚರಿಸುತ್ತಿದ್ದ ವಾಹನ ನೆಲಕ್ಕುರುಳಿತು. ಇದೇ ವೇಳೆ ಟ್ರಕ್ ಆತನ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕೆಲವು ತಿಂಗಳಿಂದ ರಸ್ತೆಗುಂಡಿ ಮುಚ್ಚಿಲ್ಲ, ಈಗ ಜನ‌ ಜೀವ ಕಳೆದುಕೊಳ್ಳುವ ಸ್ಥಿತಿ ಬಂದಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಇದೇ ವೇಳೆ ಮಾನವ ಹಕ್ಕು ಆಯೋಗ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ. ಘಟನೆಗೆ ಸಂಬಂಧಪಟ್ಟಂತೆ ಕೊಚ್ಚಿ ಸಿಟಿ ಪೊಲೀಸ್ ಹಾಗೂ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಆಯೋಗ ನೋಟಿಸ್ ನೀಡಿದೆ.