Tuesday, September 8, 2026
ಸುದ್ದಿ

ಫೇಸ್ಬುಕ್ ನಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಅವಹೇಳನೆ | ರಾವಿಕಾಂತೆ ಗೌಡ ಕಡಕ್ ಎಚ್ಚರಿಕೆ – ಕಹಳೆ ನ್ಯೂಸ್

 

ಜಾಹೀರಾತು

ಮಂಗಳೂರು : ಫೇಸ್ಬುಕ್ ಪೇಜ್ ವೊಂದರಲ್ಲಿ ಆರ್ ಎಸ್ ಎಸ್ ನ ಹಿರಿಯ ನಾಯಕ ಕಲ್ಲಡ್ಕ್ ಪ್ರಭಾಕರ್ ಭಟ್ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಗೆ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ನೂತನ ಎಸ್ಪಿ ರವಿಕಾಂತೆಗೌಡ ಎಚ್ಚರಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ದ ನಿಂದನಾತ್ಮಕ ಪೋಸ್ಟ್ ಗೆ ಸಾಮಜಿಕ ಜಾಲತಾಣದಲ್ಲಿ ಚರ್ಚೆಗೆ ಅಕ್ರೋಶಕ್ಕೆ ಕಾರಣವಾಗಿತ್ತು. ಪ್ರಭಾಕರ್ ಭಟ್ ಗೆ ಅವಮಾನ ಮಾಡಿದ್ದ ಟ್ರೂ ಮೀಡಿಯಾ ನೆಟ್ವರ್ಕ್ ವಿರುದ್ದ ಪ್ರಬಾಕರ್ ಭಟ್ ಬೆಂಬಲಿಗರು ಅಕ್ರೋಶಗೊಂಡಿದ್ದು ಕೆಲವರನ್ನು ತರಾಟೆಗೆ ತೆಗೆದುಕೊಂಡ ಘಟನೆಗಳು ನಡೆದಿದೆ ಎಂದು ತಿಳಿದು ಬಂದಿದೆ.

ಟ್ರೂ ಮೀಡಿಯಾ ನೆಟ್ ವರ್ಕ್ ಪೋಸ್ಟ್ ಜಿಲ್ಲೆಯಲ್ಲಿ ಶಾಂತಿಭಂಗಕ್ಕೆ ಕಾರಣ ವಾಗುತ್ತಿರುವುದರಿಂದ ಮುಂದೆ ಈ ರೀತಿ ಘಟನೆ ಸಂಭವಿಸದಂತೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆಯ ಸಂದೇಶವನ್ನು ಎಸ್ಪಿ ರವಿಕಾಂತೆ ಗೌಡ ರವಾನಿಸಿದ್ದಾರೆ.

ವರದಿ : ಕಹಳೆ ನ್ಯೂಸ್