Tuesday, September 8, 2026
ಸುದ್ದಿ

ನಿವೃತ್ತ ಶಿಕ್ಷಕ ಪಿ.ಸುಬ್ರಹ್ಮಣ್ಯ ಭಟ್ ನಿಧನ – ಕಹಳೆ ನ್ಯೂಸ್

 

ಜಾಹೀರಾತು

ಪುತ್ತೂರು : ಕೊಯಿಲ ಗ್ರಾಮದ ನಿವಾಸಿ ನಿವೃತ್ತ ಶಿಕ್ಷಕ ಪಿ ಸುಬ್ರಹ್ಮಣ್ಯ ಭಟ್(೮೩) ರವರು ಅಲ್ಪಕಾಲದ ಅನಾರೋಗ್ಯದಿಂದ ದಿನಾಂಕ ೨೯/೧/೨೦೧೮ ರ ಮುಂಜಾನೆ ಆದರ್ಶ ಆಸ್ಪತ್ರೆಯಲ್ಲಿ ನಿಧನರಾದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮೃತರು ಗುತ್ತಿಗಾರು,ಇಳಂತಿಲ, ರಾಮಕುಂಜ,ಕೊಯಿಲ, ವಳಕಡಮ,ಶಾಲೆಗಳಲ್ಲಿ ಒಟ್ಟು ೪೦ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಕೌಕ್ರಾಡಿ ಗ್ರಾಮದ ಹಿರಿಯ ಮಗ ವೆಂಕಟ ಕೃಷ್ಣಭಟ್ ರವರ ಮನೆ ‘ಪರಕೆ’ ಯಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದರು.

ಮೃತರು ಪತ್ನಿ ಶ್ರೀಮತಿ ದೇವಕಿ ಅಮ್ಮ , ಪುತ್ರರಾದ ವೆಂಕಟ ಕೃಷ್ಣ ಭಟ್(ಕೃಷಿಕ), ಪಿ ಎಸ್ ನಾರಾಯಣ ಭಟ್( ಕುಂಡಾಜೆ ಶಾಲಾ ಮುಖ್ಯಗುರು),
ಶಿವರಾಮ ಭಟ್ (ಕೊಯಿಲ ಶಾಲಾ SDMC ಅಧ್ಯಕ್ಷ), ಪುತ್ರಿಯರಾದ ವಿಜಯಲಕ್ಷ್ಮಿ, ಪಾರ್ವತಿ, ಶಾರದಾ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರ ಮನೆಗೆ ಕೊಯಿಲ ಶಾಲಾ ಮುಖ್ಯ ಗುರು ಕುಶಾಲಪ್ಪ.ಪಿ.,ನಿವೃತ್ತ ಮುಖ್ಯಗುರು ರಘುನಾಥ ರೈ, ಮಾಜಿ ಗ್ರಾಮಪಂಚಾಯಿತ್ ಸದಸ್ಯ ನೀರಜ್ ಮತ್ತು SDMC ಸದಸ್ಯ ನಾರಾಯಣ ಗೌಡ, ಅಸಂಖ್ಯ ಸಂಖ್ಯೆಯ ಬಂಧು ಮಿತ್ರರು ಬೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.

ವರದಿ : ಕಹಳೆ ನ್ಯೂಸ್