Recent Posts

Wednesday, May 6, 2026
ಸುದ್ದಿ

ಪಂಜದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಹೊಳೆಯಲ್ಲಿ ಪತ್ತೆ – ಕಹಳೆ ನ್ಯೂಸ್

ಸುಬ್ರಹ್ಮಣ್ಯ; ಪಂಜದ ಕೂತ್ಕುಂಜ ಗ್ರಾಮದ ಕುದ್ವ ಶೇಷಪ್ಪ ಗೌಡ (73)ಎಂಬವರು ಸೆ. 3ರಂದು ನಾಪತ್ತೆಯಾಗಿದ್ದು ಇಂದು ಇವರ ಮೃತದೇಹ ಪತ್ತೆಯಾಗಿದೆ.

ಪಲ್ಲೋಡಿ ಹೊಳೆಯ ನೆರೆ ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ಇದ್ದ ಹಿನ್ನಲೆ ಎನ್‍ಡಿಆರ್‍ಎಫ್ ಸಿಬ್ಬಂದಿಗಳು ಶೋಧನೆ ನಡೆಸಿದ್ದರು. ಇಂದು ಶೇಷಪ್ಪರ ಮೃತದೇಹ ಪತ್ತೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಶೇಷಪ್ಪ ಗೌಡರು ಸೆ. 3ರಂದು ಬೆಳಗ್ಗೆ ತೋಟದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಮೈ ಹುಷಾರಿಲ್ಲ ಎಂದು ಜ್ವರಕ್ಕೆ ಔಷಧ ತರಲು ಪಂಜಕ್ಕೆ ಹೋಗುತ್ತೇನೆ ಎಂದು ಮನೆಯವರಲ್ಲಿ ಹೇಳಿ ಹೋಗಿದ್ದರು. ಸಂಜೆಯಾದರು ಅವರು ಮನೆಗೆ ಬಾರದಿದ್ದರಿಂದ ಮಗ ಹರೀಶ್ ಪಂಜಕ್ಕೆ ಸಂಪರ್ಕಿಸುವ ಕಾಲು ದಾರಿಯಲ್ಲಿ ಹುಡುಕುತ್ತಾ ಹೋದಾಗ ತೋಟದ ಬಳಿಯ ತೋಡಿನ ಕಾಲು ಸಂಕದ ಮೇಲೆ ಅಳವಡಿಸಿದ್ದ ಅಡ್ಡ ತುಂಡಾಗಿದ್ದುದು ಗೋಚರಿಸಿದೆ. ಇದರಿಂದ ಸಂಶಯಗೊಂಡು ಅಲ್ಲಿನ ಸಮೀಪದ ನಿವಾಸಿಗಳೊಂದಿಗೆ ಹುಡುಕಾಟ ನಡೆಸಿದಾಗ ಹೊಳೆಯಲ್ಲಿ ಅವರ ಒಂದು ಚಪ್ಪಲಿ ಪತ್ತೆಯಾಗಿದೆ.

ಸ್ಥಳಕ್ಕೆ ಆಗಮಿಸಿದ ಮುಳುಗು ತಜ್ಞರು ಗೃಹರಕ್ಷಕ ದಳದ ಸಿಬ್ಬಂದಿಗಳ ಸತತ ಕಾರ್ಯಚರಣೆಯಿಂದ ಇಂದು ಮೃತದೇಹ ಪತ್ತೆಯಾಗಿದೆ.