Wednesday, May 6, 2026
ಸುದ್ದಿ

ಕೃಷ್ಣಾ ನದಿಯಲ್ಲಿ ಮತ್ತೆ ಪ್ರವಾಹದ ಭೀತಿ; ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ – ಕಹಳೆ ನ್ಯೂಸ್

ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಕೆಲವೆಡೆ ಸಾಧಾರಣ ಮಳೆಯಾಗುತ್ತಿದೆ. ಉತ್ತರ ಕರ್ನಾಟಕ ಪ್ರವಾಹಕ್ಕೆ ಸಿಲುಕಿ ಮತ್ತೆ ಚೇತರಿಸಿಕೊಳ್ಳುವಷ್ಟರಲ್ಲಿ ಮಹಾರಾಷ್ಟ್ರದ ಕೊಯ್ನಾ ಡ್ಯಾಂನಿಂದ ನೀರು ಬಿಡಲಾಗುತ್ತಿದೆ. ಇದರಿಂದ ಕೃಷ್ಣಾ ನದಿಯಲ್ಲಿ ಮತ್ತೆ ಪ್ರವಾಹದ ಭೀತಿ ಹೆಚ್ಚಾಗಿದೆ. ರಾಜ್ಯದ ವಿವಿಧ ಜಲಾಶಯಗಳು ಸಾಧಾರಣ ಮಟ್ಟದಲ್ಲಿವೆ. ಅವುಗಳ ಇಂದಿನ ನೀರಿನ ಮಟ್ಟ ಇಲ್ಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಆಲಮಟ್ಟಿ ಜಲಾಶಯ
ಗರಿಷ್ಠ ಮಟ್ಟ- 519.60 ಮೀ.
ಇಂದಿನ ಮಟ್ಟ- 519.60 ಮೀ.
ಗರಿಷ್ಠ ಸಾಮರ್ಥ್ಯ – 123.081 ಟಿಎಂಸಿ
ಇಂದಿನ ನೀರು ಸಂಗ್ರಹ- 123.081 ಟಿಎಂಸಿ
ಒಳಹರಿವು-42000 ಕ್ಯೂಸೆಕ್
ಹೊರ ಹರಿವು- 42000 ಕ್ಯೂಸೆಕ್

ಕೆ.ಆರ್.ಸಾಗರದ ನೀರಿನ ಮಟ್ಟ
ಗರಿಷ್ಟ ಮಟ್ಟ-124.80
ಪ್ರಸ್ತುತ ಮಟ್ಟ-124.80
ಒಳಹರಿವು-8808
ಹೊರಹರಿವು-8599
ಸಂಗ್ರಹ-49.452 ಟಿಎಂಸಿ

ಕಬಿನಿ ಜಲಾಶಯ
ಇಂದಿನ ಒಳಹರಿವು 8,412 ಕ್ಯೂಸೆಕ್
ಇಂದಿನ ಹೊರಹರಿವು 7,068 ಕ್ಯೂಸೆಕ್
ಇಂದಿನ ನೀರಿನ ಮಟ್ಟ 2283.96 ಅಡಿ
ಗರಿಷ್ಠ ನೀರಿನ ಮಟ್ಟ 2284 ಅಡಿ.
ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 19.52 ಟಿಎಂಸಿ
ಇಂದು ಇರುವ ನೀರಿನ ಸಂಗ್ರಹ 19.49 ಟಿಎಂಸಿ