
ಬಂಟ್ವಾಳ: ಸಮಾಜದ ಸಾಮರಸ್ಯ ಮತ್ತು ಸ್ವಾಸ್ಥ್ಯವನ್ನು ಕಳೆದ ಕೆಲವು ವರ್ಷಗಳಿಂದ ಕೆಡಿಸುತ್ತಿದ್ದ ಮತಾಂಧ ಟಿಪ್ಪು ಜಯಂತಿಯನ್ನು ಸರಕಾರ ಆಯೋಜಿಸಿ ಆಚರಣೆ ಮಾಡಿಕೊಂಡು ಬರುತಿತ್ತು. ಇದು ಕರ್ನಾಟಕ ಸರಕಾರಕ್ಕೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿತ್ತು. ಇದೀಗ ನೂತನವಾಗಿ ಆಯ್ಕೆಯಾದ ಯಡಿಯೂರಪ್ಪ ಸರಕಾರ ಜಯಂತಿಯನ್ನು ರದ್ದುಪಡಿಸಿ ಅದೇಶ ಹೊರಡಿಸಿರುವುದು ಸ್ವಾಭಿಮಾನ ರಾಷ್ಟ್ರ ಭಕ್ತ ಹೋರಾಟಗಾರರಿಗೆ ಸಿಕ್ಕಿದ ಜಯ ಎಂದು ಹಿಂದು ಜಾಗರಣ ವೇದಿಕೆ ಅಭಿಪ್ರಾಯ ವ್ಯಕ್ತಪಡಿಸಿದೆ.
ಜೊತೆಗೆ ಟಿಪ್ಪು ವಿರೋಧಿ ಅಂದೋಲನದಲ್ಲಿ ಭಾಗಿಯಾದ ಹುತಾತ್ಮರ ಬಲಿದಾನವೂ ವ್ಯರ್ಥವಾಗಿಲ್ಲ ಎಂದು ಹಿಂದೂ ಜಾಗರಣಾ ವೇದಿಕೆ ಬಂಟ್ವಾಳ ಘಟಕ ಹೇಳಿದ್ದಲ್ಲದೆ, ಯಡಿಯೂರಪ್ಪ ಅವರ ಸರಕಾರಕ್ಕೆ ಕೃತಜ್ಞತೆ ಸಲ್ಲಿಸಿದೆ.
ಅಲ್ಲದೆ ಟಿಪ್ಪು ಜಯಂತಿ ಆಚರಣೆ ವಿರುದ್ಧ ನಡೆದ ಅಂದೋಲನದಲ್ಲಿ ಭಾಗಿಯಾದ ಯುವಕರ ಮೇಲೆ ಅಂದಿನ ಸರಕಾರ ಹಾಕಿರುವ ಕೇಸನ್ನು ಸರಕಾರ ವಾಪಾಸು ಪಡೆಯುವಂತೆ ಹಿ.ಜಾ.ವೇ ಮಂಗಳೂರು ವಿಭಾಗ ಪ್ರಧಾನ ಕಾರ್ಯದರ್ಶಿ ರವಿರಾಜ್ ಬಿ.ಸಿರೋಡು ಹಾಗೂ ಬಂಟ್ವಾಳ ಹಿ.ಜಾ.ವೇ ಬಂಟ್ವಾಳ ತಾಲೂಕು ಅಧ್ಯಕ್ಷರಾದ ಚಂದ್ರ ಕಲಾಯಿ ಹಾಗೂ ಬಂಟ್ವಾಳ ವಿಭಾಗದ ಕಾರ್ಯದರ್ಶಿ ಪ್ರಶಾಂತ್ ಕೆಂಪುಗುಡ್ಡೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ









