Monday, May 4, 2026
ಸುದ್ದಿ

ಬಂಟ್ವಾಳದಲ್ಲಿ ಅಕ್ರಮವಾಗಿ ಹೋರಿ ಸಾಗಾಟ : ಆರೋಪಿ ಅಂದರ್ – ಕಹಳೆ ನ್ಯೂಸ್

ಬಂಟ್ವಾಳ : ಹೋರಿಯೊಂದನ್ನ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಬಂಟ್ವಾಳ ತಾಲೂಕು, ಬಡಗಕಜೆಕಾರು ಗ್ರಾಮದ ಪಾಂಡವರಕಲ್ಲು ಜಂಕ್ಷನ್ ಬಳಿ ನಡೆದಿದೆ. ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ಠಾಣಾ ಸಿಬ್ಬಂದಿಗಳೊಂದಿಗೆ ಸ್ಧಳಕ್ಕೆ ಆಗಮಿಸಿದಾಗ ಕೆಎ-18 ಎ 5422ನೇ ಪಿಕ್ ಅಪ್ ವಾಹನದಲ್ಲಿ, ಬಂಟ್ವಾಳ ಕಜೆಕಾರು ನಿವಾಸಿ ಕಾಸಿಂ(42) ಎಂಬಾತನು ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ ಹಿಂಸಾತ್ಮಕವಾಗಿ ಸಾಗಟ ಮಾಡುತ್ತಿದ್ದ ಹೋರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಹೋರಿಯನ್ನ ವಧೆ ಮಾಡಿ, ಮಾಂಸ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹೋರಿ ಹಾಗೂ ಪಿಕಾಪ್ ವಾಹನವನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು