Wednesday, March 18, 2026
ರಾಜಕೀಯ

ನಾಯಕ ಬಿ.ಎಸ್. ಯಡಿಯೂರಪ್ಪ ಅವರಿಗೆ ನೇರ ಸವಾಲು ಹಾಕಿದ ಹೆಚ್.ಡಿ.ಕುಮಾರಸ್ವಾಮಿ – ಕಹಳೆ ನ್ಯೂಸ್

ಬೆಂಗಳೂರು : ಅಧಿಕಾರ ಎನ್ನುವುದು ಯಾರಿಗೂ ಶಾಶ್ವತವಲ್ಲ, ನೀವೆಷ್ಟು ದಿನ ಈ ಆಡಳಿತ ಪಕ್ಷದಲ್ಲಿ ಕುಳಿತು ಅಧಿಕಾರ ನಡೆಸುತ್ತೀರಿ ಎಂಬುದನ್ನು ನಾನು ನೋಡುತ್ತೇನೆ ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಅವರಿಗೆ ನೇರ ಸವಾಲು ಹಾಕಿದ್ದಾರೆ.

ವಿಶ್ವಾಸಮತಯಾಚನೆ ಪ್ರಾಥಮಿಕ ಪೀಠಿಕೆಯಲ್ಲಿ ಮಾತನಾಡಿದ ಸಿಎಂ, ಸರ್ಕಾರ ರಚಿಸಿ ಸಿಎಂ ಸ್ಥಾನದಲ್ಲಿ ಕೂರಲು ಯಡಿಯೂರಪ್ಪ ತುಂಬಾ ಆತುರರಾಗಿದ್ದಾರೆ. ನಾವು ವಿಶ್ವಾಸಮತ ಯಾಚಿಸಲು ಸಿದ್ದರಿದ್ದೇವೆ. ಮತಕ್ಕೆ ಹಾಕುವ ಮುನ್ನ ಕೆಲಸಂಗತಿಗಳನ್ನು ನಾಡಿನ ಜನತೆಗೆ ತಿಳಿಸಬೇಕಿದೆ. ಅನೇಕ ಸದಸ್ಯರು ಮಾತನಾಡುತ್ತೇವೆ ಎಂದಿದ್ದಾರೆ, ಅವರ ಹಕ್ಕು ಮೊಟಕು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ನಾನೆಂದೂ ಸಿಎಂ ಆಗುವ ಕನಸು ಕಂಡವನಲ್ಲ, ವಿಧಿ ಆಟ, ದೇವರು ಕೊಟ್ಟಿರುವ ಪದವಿ ಇದು, ಇದಕ್ಕೆ ನಾನು ಅಂಟಿಕೊಂಡವನಲ್ಲ. ದೇವೇಗೌಡರ ಕುಟುಂಬ ಎಂದೂ ಅಧಿಕಾರಕ್ಕೆ ಅಂಟಿಕೊಂಡು ಕೂತಿಲ್ಲ ಎಂದರು.

ಜಾಹೀರಾತು
ಜಾಹೀರಾತು

ಅತೃಪ್ತ ಶಾಸಕರ ಕುರಿತು ಮಾತನಾಡಿದ ಸಿಎಂ, ನಮಗೆ ದ್ರೋಹ ಮಾಡಿದರೂ ಸರಿ, ನಿಮ್ಮನ್ನು ಆಯ್ಕೆ ಮಾಡಿದ ಜನರಿಗೆ ದ್ರೋಹ ಮಾಡಬೇಡಿ ಎಂದು ಅತೃಪ್ತ ಶಾಸಕರಿಗೆ ಮನವಿ ಮಾಡಿದರು. ಮುಂಬೈನಲ್ಲಿ ಬಿಜೆಪಿಯವರು ಪರ್ಮನೆಂಟ್ ಹೋಟೆಲ್ ಮಾಡಿಕೊಂಡಿದ್ದಾರೆ ಶಾಸಕರನ್ನು ಇಲ್ಲಿ ಹಿಡಿದಿಟ್ಟುಕೊಳ್ಳಲು ನಿಮಗೆ ಶಕ್ತಿ ಇಲ್ಲ. ಅಲ್ಲಿ ಗನ್ ಮೆನ್, ಬೌನ್ಸರ್ ಗಳನ್ನು ಬಿಟ್ಟು ಎಷ್ಟು ದಿನ ಈ ರೀತಿ ನಡೆಸುತ್ತೀರಿ ಎಂದು ಬಿಜೆಪಿಯನ್ನು ಪ್ರಶ್ನಿಸಿದರು.