Recent Posts

Wednesday, May 6, 2026
ಸುದ್ದಿ

ನಮೋ ಸರ್ಕಾರದಿಂದ ಮಹಿಳಾ ಉದ್ಯೋಗಿಗಳಿಗೆ ಗುಡ್‍ನ್ಯೂಸ್ – ಕಹಳೆ ನ್ಯೂಸ್

ಮೋದಿ ಸರ್ಕಾರ ಜುಲೈ 10ರಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಸೇಫ್ಟಿ ಹೆಲ್ತ್ ಆ್ಯಂಡ್ ವರ್ಕಿಂಗ್ ಕಂಡಿಶನ್ ಬಿಲ್ 2019ಕ್ಕೆ ಅನುಮೋದನೆ ನೀಡಿದೆ. ಈ ಮಸೂದೆಯಲ್ಲಿ ಉದ್ಯೋಗಿಗಳ ಸುರಕ್ಷತೆ, ಆರೋಗ್ಯ, ಕೆಲಸದ ಪರಿಸ್ಥಿತಿ ಬಗ್ಗೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಕಚೇರಿಯಲ್ಲಿ ಮಹಿಳೆಯರ ಕೆಲಸದ ಸಮಯವನ್ನು ನಿಗಧಿ ಮಾಡಲಾಗಿದೆ. ಬೆಳಿಗ್ಗೆಯಿಂದ ಸಂಜೆ 7 ಗಂಟೆಯವರೆಗೆ ಮಹಿಳೆಯರು ಕೆಲಸ ಮಾಡಬಹುದು. ಒಂದು ವೇಳೆ ಸಂಜೆ 7 ಗಂಟೆಗಿಂತ ಹೆಚ್ಚು ಸಮಯ ಮಹಿಳೆಯರು ಕೆಲಸ ಮಾಡಿದರೆ, ಅವರ ರಕ್ಷಣೆಯ ಹೊಣೆ ಕಂಪೆನಿಯದ್ದಾಗುತ್ತದೆ. ಓವರ್ ಟೈಂ ಮಹಿಳೆಯರಿಂದ ಕೆಲಸ ಮಾಡಿಸಿಕೊಳ್ಳಬೇಕೆಂದಾಗ ಮಹಿಳಾ ಉದ್ಯೋಗಿಗಳ ಅನುಮತಿ ಪಡೆಯಬೇಕಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಂಪೆನಿಯಲ್ಲಿ ಕೆಲಸ ಮಾಡುವ ಮಹಿಳೆಯರ ಮಕ್ಕಳಿಗೆ ಕ್ರಿಚ್ ಹಾಗೂ ಕ್ಯಾಂಟೀನ್ ಕಡ್ಡಾಯವಾಗಿರಬೇಕು. ನಿಗಧಿತ ಸಮಯದ ನಂತರ ಉದ್ಯೋಗಿಗಳಿಗೆ ಉಚಿತ ಆರೋಗ್ಯ ತಪಾಸಣೆ ನೀಡಬೇಕಾಗುತ್ತದೆ. ದೇಶದ ಎಲ್ಲಾ ಕಂಪನಿಗಳು ನೌಕರರಿಗೆ ಅಪಾಯಿಂಟ್‍ಮೆಂಟ್ ಲೆಟರ್ ನೀಡುವುದು ಕಡ್ಡಾಯ.