Tuesday, April 28, 2026
ಸುದ್ದಿ

ಕುಟ್ರುಪ್ಪಾಡಿ ಗ್ರಾ.ಪಂ. ನ ವತಿಯಿಂದ ಸ್ವಚ್ಚಮೇವ ಜಯತೇ – ಕಹಳೆ ನ್ಯೂಸ್

ಕಟ್ರುಪ್ಪಾಡಿ: ಕುಟ್ರುಪ್ಪಾಡಿ ಗ್ರಾ.ಪಂ ಕಳೆದ ಒಂದು ತಿಂಗಳಿನಿಂದ ಸ್ವಚ್ಛಮೇವ ಜಯತೆ ಕಾರ್ಯಕ್ರಮ ಮಾಡಿಕೊಂಡು ಬರುತ್ತಿದು ಇಂದು ಇವರ ನೇತೃತ್ವದಲ್ಲಿ ರಾಮಕೃಷ್ಣಮಿಶನ್ ಕುಟ್ರುಪ್ಪಾಡಿ ಗ್ರಾಮ ಸಮಿತಿ ಹಾಗೂ ಕಡಬ ಸರಕಾರಿ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಆಶ್ರಯದಲ್ಲಿ ಸ್ವಚ್ಚಮೇವ ಜಯತೇ ಕಾರ್ಯಕ್ರಮ ನಡೆಯಿತು.
ಉಪ್ಪಿನಂಗಡಿ – ಕಡಬ-ಸುಬ್ರಹ್ಮಣ್ಯ ರಸ್ತೆಯ ಕಡಬ ಸಮೀಪದ ಕಳಾರದಿಂದ ಹೊಸಮಠ ತನಕ ರಸ್ತೆ ಬದಿಯ ಕಸ-ಕಡ್ಡಿಗಳು, ಪ್ಲಾಸ್ಟಿಕ್, ಹಾಗೂ ಪ್ಲಾಸ್ಟಿಕ್ ಬಾಟಲಿಗಳನ್ನು ಹೆಕ್ಕಿ ಸ್ವಚ್ಚಮಾಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮವನ್ನು ಕುಟ್ರುಪ್ಪಾಡಿ ಗ್ರಾ.ಪಂ ಅಧ್ಯಕ್ಷೆ ವಿದ್ಯಾ ಗೋಗಟೆ ಉದ್ಘಾಟಿಸಿದರು. ಕುಟ್ರುಪ್ಪಾಡಿ ಹಾಲು ಉತ್ಪಾದಕ.ಸಹಕಾರಿ ಸಂಘದ ಅಧ್ಯಕ್ಷ ಕಿರಣ್ ಗೋಗಟೆ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ವಿಲ್ಪ್ರೇಡ್ ಲಾರೆನ್ಸ್ ರೋಡಿಗ್ರಸ್, ಗ್ರಾ.ಪಂ ಸದಸ್ಯರಾದ ಮಹಮ್ಮದ್ ಆಲಿ, ಜಾನಕಿ ಕುಂಟೋಡಿ, ದೇವಯ್ಯ ಗೌಡ ಪನ್ಯಾಡಿ, ಲಿಂಗಪ್ಪ ಗೌಡ, ತನಿಯಪ್ಪ ಸಂಪಡ್ಕ, ಆಶಾ ಕಾರ್ಯಕರ್ತೆ ತಾಲೂಕು ಸ್ತ್ರೀಶಕ್ತಿ ಮಹಿಳಾ ಸಂಘದ ಕಾರ್ಯದರ್ಶಿ ಜಯಶ್ರೀ, ಸಾಮಾಜಿಕ ಕಾರ್ಯಕರ್ತೆ ಎಲ್.ಸಿ ತೋಮಸ್, ರಾಷ್ಟ್ರೀಯ ಸೇವಾ ಸಂಯೋಜಕ ಸುಕೇಶ್‍ಚಂದ್ರಶೇಖರ್, ಕಾರ್ಯಕ್ರಮ ಅಧಿಕಾರಿ ಸಲೀನ್ ಕೆ.ಪಿ, ಸೇರಿದಂತೆ ಕುಟ್ರುಪ್ಪಾಡಿ ಗ್ರಾ.ಪಂ ಸಿಬ್ಬಂದಿಗಳು, ರಾಷ್ಟ್ರೀಯ ಸೇವಾ ಯೋಜನೆ ಶಿಭಿರಾರ್ಥಿಗಳು, ರಾಮಕೃಷ್ಣ ಮಿಶಾನ್ ಪದಾಧಿಕಾರಿಗಳು ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಂಡರು. ಗ್ರಾ.ಪಂ ಸದಸ್ಯ ಶಿವಪ್ರಸಾದ್ ರೈ ಮೈಲೇರಿ ಪ್ರಸ್ತಾವನೆ ಗೈದು ಕಾರ್ಯಕ್ರಮ ನಿರೂಪಿಸಿದರು.