Tuesday, April 28, 2026
ಸುದ್ದಿ

ಮಹಾ ಮಾರಿ ಡೆಂಗ್ಯೂಗೆ ಮಹಿಳೆ ಬಲಿ…! – ಕಹಳೆ ನ್ಯೂಸ್

ಕಡಬ: ಕಳೆದ ಕೆಲ ದಿನಗಳಿಂದ ಮಹಾಮಾರಿ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಕೋಡಿಂಬಾಳ ಗ್ರಾಮದ ಕುಕ್ಕೆರೆಬೆಟ್ಟು ನಿವಾಸಿ ಆನಂದ ನಾಯ್ಕ್ ಅವರ ಪತ್ನಿ ವೀಣಾ (43) ಅವರು ನಿನ್ನೆ ಮುಂಜಾನೆ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಕೆಲ ದಿನಗಳಿಂದ ಕಡಬದ ಖಾಸಗಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ದಿನೇ ದಿನೇ ಜ್ವರ ಉಲ್ಬಣಗೊಂಡ ಕಾರಣ ಜೂ. 24 ರಂದು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಮೃತರು ಪತಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು