
ಬೆಳ್ತಂಗಡಿ: ಬೆಳ್ತಂಗಡಿಯ ಪ್ರವಾಸಿ ತಾಣವೆನಿಸಿದ ನರಸಿಂಹಗಡದಲ್ಲಿ ಇಂದು ಬೆಳ್ಳಂ ಬೆಳಗ್ಗೆ ಅವಘಡವೊಂದು ಸಂಭವಿಸಿದೆ. ನರಸಿಂಹಗಡ ಮೇಲಿನ ಭಾಗದ ಕಲ್ಲಿನ ಒಂದು ಬದಿ ಇಂದು ಮುಂಜಾನೆ 6-45 ರ ಸುಮಾರಿಗೆ ತನ್ನಷ್ಟಕ್ಕೆ ಜಾರಿ ಕೆಳಗೆ ಬಿದ್ದಿದೆ. ಬಿದ್ದ ಕ್ಷಣ ದೊಡ್ಡದಾಗಿ ಶಬ್ಧವಾಗಿದೆ. ಭಾರೀ ಧೂಳು ಆವರಿಸಿದೆ. ಇದು ಯಾಕೆ ಕುಸಿತಗೊಂಡಿದೆ ಎಂಬುವುದು ಇನ್ನಷ್ಟೇ ತಿಳಿಯಬೇಕಿದೆ.








