Saturday, May 9, 2026
ಸುದ್ದಿ

ವಿಶಿಷ್ಟ’ ಸೇವಾ ಪದಕಕ್ಕೆ ಭಾಜನರಾದ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ವರು ಪೊಲೀಸ್ ಅಧಿಕಾರಿಗಳು – ಕಹಳೆ ನ್ಯೂಸ್

ಮಂಗಳೂರು: ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ನೀಡುವ ರಾಷ್ಟ್ರಪತಿಗಳ `ಶ್ಲಾಘನೀಯ’ ಸೇವಾ ಪದಕ, `ವಿಶಿಷ್ಟ’ ಸೇವಾ ಪದಕಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ವರು ಪೊಲೀಸ್ ಅಧಿಕಾರಿಗಳು ಭಾಜನರಾಗಿದ್ದಾರೆ.

ಮಂಗಳೂರು ಎಸಿಪಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಉದಯ್ ನಾಯಕ್, ಮಂಗಳೂರು ನಗರ ಸಿಸಿಆರ್ ಬಿ ಎಸಿಪಿ ವಿನಯ್ ಎ ಗಾಂವ್ಕರ್, ಎಸಿಬಿ ಡಿವೈಎಸ್ಪಿ ಸುಧೀರ್ ಎಮ್ ಹೆಗ್ಡೆ, ಭಟ್ಕಳ ಡಿವೈಎಸ್ಪಿಯಾಗಿರುವ ವೆಲಂಟೈನ್ ಡಿಸೋಜಾ ಅವರು ರಾಷ್ಟ್ರಪತಿಗಳ ಪೊಲೀಸ್ ಪದಕಕ್ಕೆ ಆಯ್ಕೆಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಡಿಜಿಪಿ ಡಾ. ಎಸ್ ಪರಶಿವಮೂರ್ತಿ ಅವರು ಪದಕ ಪಡೆದ ಪೊಲೀಸ್ ಅಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಜುಲೈ 5 ರಂದು ಬೆಂಗಳೂರಿನ ರಾಜಭವನದ ಗಾಜಿನ ಮನೆಯಲ್ಲಿ ಪದ ಪ್ರದಾನ ಮಾಡಲಾಗುವುದು.