Thursday, May 14, 2026
ಸುದ್ದಿ

ಮಳೆಗಾಲದಲ್ಲಿ ರೋಗದಿಂದ ದೂರವಿರಲು ಮಾಹಿತಿ ಕಾರ್ಯಗಾರ – ಕಹಳೆ ನ್ಯೂಸ್

ಭಟ್ಕಳ : ಈಗಾಗಲೇ ಮಳೆಗಾಲ ಪ್ರಾರಂಭವಾಗಿದೆ. ಮಳೆಗಾಲದ ಜೊತೆ ಜೊತೆಗೆ ಹತ್ತು ಹಲವು ರೋಗಗಳೂ ಮನುಷ್ಯನನ್ನು ಕಾಡಲು ಪ್ರಾರಂಭವಾಗುತ್ತದೆ. ಕಾರಣ ಜನರು ತಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಗಲೀಜು ಮಾಡುವುದು. ಹೀಗೆ ಮಾಡದೆ ಶುಚಿಯಾಗಿರುವಂತೆ ನೋಡಿಕೊಳ್ಳುವುದರ ಮೂಲಕ ರೋಗಗಳಿಂದ ರಕ್ಷಣೆಯನ್ನು ಪಡೆಯಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿನ್ನಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಭಟ್ಕಳ, ಇವರ ವತಿಯಿಂದ, ಮಲೇರಿಯಾ ವಿರೋಧಿ ಮಾಸಾಚರಣೆ ಜೂನ್ 2019 ಕಾರ್ಯಕ್ರಮ ನಡೆಯಿತು, ಕಾರ್ಯಕ್ರಮವನ್ನು ಭಟ್ಕಳ ಶಾಸಕ ಸುನಿಲ್ ನಾಯ್ಕ್ ಉದ್ಘಾಟಿಸಿದರು. ಮಳೆಗಾಲದಲ್ಲಿ ಸಾಮಾನ್ಯವಾಗಿ ಕಂಡುಬರುವಂತಹ ರೋಗಗಳ ಬಗ್ಗೆ ಅರಿವು ಮೂಡಿಸುವ ಮತ್ತು ಮಾಹಿತಿಯನ್ನು ನೀಡುವ ಇಂತಹ ಕಾರ್ಯಕ್ರಮಗಳು ಎಲ್ಲಾ ಶಾಲಾ ಕಾಲೇಜುಗಳಲ್ಲಿ ನಡೆದರೆ ಜನರಲ್ಲಿ ಜಾಗೃತಿ ಮೂಡಿಸಲು ಸಹಕಾರಿಯಾಗಲಿದೆ.