Wednesday, May 6, 2026
ಸುದ್ದಿ

ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಂಘ ಕುಡ್ತಮುಗೇರು ವಲಯದಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ- ಕಹಳೆ ನ್ಯೂಸ್

ಬಂಟ್ವಾಳ: ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಂಘ (ರಿ) ಹಾಗೂ ಮಹಿಳಾ ವೇದಿಕೆ ಕುಡ್ತಮುಗೇರು ವಲಯ ಇದರ ವತಿಯಿಂದ ನಡೆದ ಸಾಮಾನ್ಯ ಸಭೆಯಲ್ಲಿ ಮುಖ್ಯ ಅತಿಥಿಯಾದ ಹರೀಶ್ ಶಾಂತಿ ಪುತ್ತೂರು ಅವರ ಉಪಸ್ಥಿತಿಯಲ್ಲಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದಭ೯ದಲ್ಲಿ ಸಂಘದ ಗೌರವಧ್ಯಕ್ಷರಾದ ಮುಂಡಪ್ಪ ಪೂಜಾರಿ, ಅಧ್ಯಕ್ಷರಾದ ವಿಶ್ವನಾಥ ಪೂಜಾರಿ ನರ್ಕಳ, ಪ್ರಧಾನ ಕಾರ್ಯದರ್ಶಿ ಶ್ರೀ ಮನೀಷ್ ಪೂಜಾರಿ ಮಂಕುಡೆ ಶಾಲಾಬಳಿ, ಸಂಚಾಲಕರು ಶ್ರೀ ಲವೀನ್ ಪೂಜಾರಿ ಕುಡ್ತಮುಗೇರು ಹಾಗೂ ಮಹಿಳಾ ಸಂಘದ ಅಧ್ಯಕ್ಷೆ ಶ್ರೀಮತಿ ಪ್ರಮಿತಾ ಲೋಕೇಶ್ ಪೂಜಾರಿ ಕುಡ್ತಮುಗೇರು, ಪ್ರಧಾನ ಕಾರ್ಯದರ್ಶಿ ಕುಮಾರಿ ಪ್ರೀತಾ ಕುದ್ರಿಯ ಮತ್ತು ಸಮಸ್ತ ಬಿಲ್ಲವ ಬಾಂಧವರು, ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸುಜೀತ್ ಪೂಜಾರಿ ಕಾಯ೯ಕ್ರಮ ನಿರೂಪಿಸಿದರು.