
ಮಂಗಳೂರು : ದುಬಾಯಿನಿಂದ ಮಂಗಳೂರಿಗೆ ಅಕ್ರಮವಾಗಿ ಚಿನ್ನ ಸಾಗಾಟ ಪ್ರಕರಣವನ್ನ ಮಂಗಳೂರು ಕಸ್ಟಂಸ್ ಅಧಿಕಾರಿಗಳಿಂದ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿಯ ವರೆಗೆ ಒಟ್ಟು ಮೂರು ಚಿನ್ನ ಸಾಗಾಟ ಪ್ರಕರಣವನ್ನ ಬೇದಿಸಿದ್ದಾರೆ, ಜೂನ್ 4 ಮತ್ತು 5 ರಂದು ಚಿನ್ನ ಸಾಗಾಟ ಪತ್ತೆಯಾಗಿತ್ತು. ಮೂರು ಪ್ರಕರಣದಲ್ಲಿ ರೂ 21.65 ಲಕ್ಷ ರೂ ಮೌಲ್ಯದ 655.94 ಗ್ರಾಂ 24 ಕ್ಯಾರೆಟ್ ಶುದ್ದತೆಯ ಚಿನ್ನವನ್ನು ವಶ ಪಡಿಸಿಕೊಳ್ಳಲಾಗಿದೆ. ಎರಡು ಪ್ರಕರಣ ಚಿನ್ನದ ಪೇಸ್ಟ್ ರೂಪವನ್ನು ಒಳ ಉಡುಪಿನಲ್ಲಿ ಅಡಗಿಸಿ ಸಾಗಾಟ. ಇನ್ನು ಒಂದು ಪ್ರಕರಣ ಅಳತೆ ಮಾಡುವ ಟೇಪ್ ಒಳಗೆ ಚಿನ್ನ ಸಾಗಾಟ ಮಾಡಿಕೊಂಡಿದ್ದರು. ಮಾಡುವ ಸಂದರ್ಭದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.








