Tuesday, April 28, 2026
ಸುದ್ದಿ

ರಾಮಕುಂಜ ಪದವಿಪೂರ್ವ ಕಾಲೇಜಿನಲ್ಲಿ ಎನ್.ಎಸ್.ಎಸ್ ಚಟುವಟಿಕೆಗಳ ಚಾಲನೆ– ಕಹಳೆ ನ್ಯೂಸ್

ಜೂನ್ 07: ಶ್ರೀ ರಾಮಕುಂಜೇಶ್ವರ ಪದವಿಪೂರ್ವ ವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ
ಚಟುವಟಿಕೆಗಳ ಉಧ್ಘಾಟನಾ ಸಮಾರಂಭ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ತಾಲೂಕು ಪಂಚಾಯಿತಿ ಸದಸ್ಯರಾದ ಶ್ರೀಮತಿ ತೇಜಸ್ವಿನಿ ಕಟ್ಟಪುಣಿಯವರು ದೀಪ ಬೆಳಗುವುದರ ಮೂಲಕ
ಉಧ್ಘಾಟನೆಯನ್ನು ಮಾಡಿದರು. ಅವರು ತಮ್ಮ ಉಧ್ಘಾಟನಾ ಭಾಷಣದಲ್ಲಿ- “ತುಳಿದಷ್ಟು ಗರಿಕೆ ಚಿಗುರುವಂತೆ
ವಿದ್ಯಾರ್ಥಿಗಳು ಕಷ್ಟ ಸಹಿಷ್ಣುಗಳಾಗಿ ಸಾಧನೆಮಾಡಬೇಕು, ಕೇವಲ ಸ್ವಾರ್ಥಪರರಾಗದೆ ಸಾಮಾಜಿಕವಾಗಿ ವಿಕಾಸಗೊಳ್ಳಬೇಕು” ಎಂದು ವಿದ್ಯಾರ್ಥಿಗಳೆಗೆ ಕರೆಕೊಟ್ಟರು. ಅವರು ರಾಷ್ಟ್ರೀಯ ಸೇವಾ ಯೋಜನೆಯ
ಸ್ವಯಂಸೇವಕರಿಗೆ ಶುಭ ಹಾರೈಸಿದರು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಎಂ ಸತೀಶ್ ಭಟ್ ಮಾತನಾಡಿ ಎನ್.ಎಸ್.ಎಸ್ ಸ್ವಯಂಸೇವಕರಿಗೆ ಶುಭಕೋರಿದರು. ಎನ್.ಎಸ್. ಎಸ್  ಯೋಜನಾಧಿಕಾರಿಗಳಾದ ಶ್ರೀ ಗಣರಾಜ ಕುಂಬ್ಳೆ ಸ್ವಾಗತಿಸಿದರು. ಎನ್.ಎಸ್.ಎಸ್ ಸಹಯೋಜನಾಧಿಕಾರಿಗಳಾದ ಶ್ರೀ ಸತೀಶ್ ಜಿ.ಆರ್ ವಂದಿಸಿದರು. ವಿದ್ಯಾರ್ಥಿನಿಯರಾದ ಅನನ್ಯ ಮತ್ತು ಬಳಗದವರು ಪ್ರಾರ್ಥನೆ ನೆರವೇರಿಸಿದರು. ಕಾಲೇಜಿನ ಉಪನ್ಯಾಸಕರಾದ ಶ್ರೀ ಚೇತನ್ ಯಂ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕರಾದ ಶ್ರೀ ನವೀನ್ಉ ಪಸ್ಥಿತರಿದ್ದರು.