Tuesday, April 28, 2026
ಸುದ್ದಿ

ಉಪಯೋಗವಿಲ್ಲದ ಚೆಕ್‍ಪೋಸ್ಟ್‍ಗಳು! ಎದ್ದು ಕಾಣುತ್ತಿದೆ ಭದ್ರತಾ ವೈಫಲ್ಯ! – ಚಾರ್ಮಾಡಿಯ ಚೆಕ್‍ಪೋಸ್ಟ್ ನ ವಿರುದ್ಧ ಪ್ರತಿಭಟನೆ – ಕಹಳೆ ನ್ಯೂಸ್

ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಅಕ್ರಮ ಗೋಸಾಗಟ ನಡೆಯುತ್ತಿದ್ದರೂ ಇದನ್ನು ತಡೆಯದ ಚೆಕ್ ಪೋಸ್ಟ್ ನ ವಿರುದ್ಧ ವಿಶ್ವ ಹಿಂದೂ ಪರಿಷದ್, ಭಜರಂಗದಳ ಆಕ್ರೋಶಗೊಂಡ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಬೆಳ್ತಂಗಡಿಯ ಮುಂಡಾಜೆ ತಿರುವಿನಲ್ಲಿ ಅಕ್ರಮವಾಗಿ ಇಕೋ ಫೋರ್ಡ್‍ನಲ್ಲಿ 6 ದನಗಳನ್ನು ಹೇರಿಕೊಂಡು ಹೋಗುತ್ತಿದ್ದ ಕಾರು ಮಗುಚಿಬಿದ್ದಿದೆ. ಈ ಪರಿಣಾಮ 5 ದನ ಸಾವನ್ನಪ್ಪಿದೆ. ಈ ಘಟನೆ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ. ಈ ವಾಹನವನ್ನು ಸರಿಯಾಗಿ ತಪಾಸಣೆ ಮಾಡದೇ ಕಳುಹಿಸಿದ ಚಾರ್ಮಾಡಿ ಚೆಕ್ ಪೋಸ್ಟ್ ನ ಅಧಿಕಾರಿಗಳನ್ನು ಚಾರ್ಮಾಡಿ ವಲಯ ವಿಶ್ವ ಹಿಂದೂ ಪರಿಷದ್ ಭಜರಂಗದಳದವರು ತರಾಟೆಗೆ ತೆಗೆದುಕೊಂಡು ಪ್ರತಿಭಟನೆ ನಡೆಸಿದರು. ನಂತರ ಎಸ್‍ಐ ಸಂದೇಶ್ ಕುಮಾರ್ಗೆ ಮನವಿಯನ್ನು ಸಲ್ಲಸಿದರು.

ಈ ವೇಳೆ ವಿಶ್ವ ಹಿಂದೂ ಪರಿಷದ್, ಭಜರಂಗದಳ ತಾಲೂಕು ಕಾರ್ಯದರ್ಶಿ ನವೀನ್ ನೆರಿಯ, ತಾಲೂಕು ಸಂಚಾಲಕ ಸಂತೋಶ್ ಅತ್ತಾಜೆ, ತಾಲೂಕು ಗೋ ರಕ್ಷಾ ಪ್ರಮುಖ್ ದಿನೇಶ್ ಚಾರ್ಮಾಡಿ, ಭಜರಂಗದಳ ತಾಲೂಕು ಸಹ ಸಂಯೋಜಕರುಗಳಾದ ಗಣೇಶ್ ಕಳೆಂಜ, ಸಾಬು ಲಾಯಿಲ, ವಿ.ಹಿಂ.ಪ ಗ್ರಾಮ ಸಮಿತಿ ಪದಾದಿಕಾರಿಗಳು, ತಾಲೂಕು ಪಂಚಾಯತ್ ಸದಸ್ಯರಾದ ಕೊರಗಪ್ಪ ಗೌಡ. ಇತರ ಕಾರ್ಯಕರ್ತರು, ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.