Tuesday, April 28, 2026
ಸುದ್ದಿ

ದಲ್ಲಾಳಿಗಳ ಹಾವಳಿ ತಪ್ಪಿಸಲು ಆಪರೇಷನ್ ಗ್ರೀನ್ಸ್ ಯೋಜನೆ- ಕಹಳೆ ನ್ಯೂಸ್

ಗದಗ: ಮಳೆ ಇದ್ದರೆ ಬೆಳೆಯಿಲ್ಲ, ಬೆಳೆ ಇದ್ದರೆ ಬೆಲೆಯಿಲ್ಲ. ಇದು ಅನ್ನದಾತನಿಗೆ ಮುಗಿಯದ ಸಮಸ್ಯೆಯಾಗಿದೆ. ಈ ಸಮಸ್ಯೆಯಿಂದ ರೈತರನ್ನು ಪಾರು ಮಾಡಲು ಕೇಂದ್ರ ಸರ್ಕಾರ “ಆಪರೇಷನ್ ಗ್ರೀನ್ಸ್’ ಯೋಜನೆಯನ್ನು ಚಾಲನೆ ನೀಡಿದ್ದು, ರೈತ ಉತ್ಪನ್ನಗಳ ಮೌಲ್ಯ ವರ್ಧನೆ ಗಾಗಿ ಕರ್ನಾಟಕ ಸೇರಿ ದೇಶದ 8 ರಾಜ್ಯಗಳನ್ನು ಈ ಯೋಜನೆಗೆ ಒಳಪಡಿಸಿದೆ. ಈಗಾಗಲೇ 2018-19ನೇ ಸಾಲಿನಲ್ಲಿ ಈ ಯೋಜನೆಗೆಂದು 500 ಕೋಟಿ ಮೀಸಲಿರಿಸಿದ್ದು, ಇದರಿಂದ ರೈತರಿಗೆ ಮಾರುಕಟ್ಟೆಗೆ ಅಲೆದಾಟ, ದಲ್ಲಾಳಿಗಳ ಹಾವಳಿಯಿಂದ ಮುಕ್ತಿ ಸಿಗಲಿದೆ. ಈ ಯೋಜನೆಯಡಿ ಸರ್ಕಾರದ ಧನಸಹಾಯದೊಂದಿಗೆ ಬೆಳೆ ಸಂಸ್ಕರಣ ಘಟಕಗಳನ್ನು ಸ್ಥಾಪಿಸಬಹುದಾಗಿದೆ. ಕರ್ನಾಟಕದಲ್ಲಿ ಟೋಮೆಟೋ, ಈರುಳ್ಳಿ ಹಾಗೂ ಆಲೂಗಡ್ಡೆ ಬೆಳೆಗಳನ್ನು ಈ ಯೋಜನೆಯಡಿ ಆಯ್ಕೆ ಮಾಡಲಾಗಿದೆ. ರೈತರು ಹಾಗೂ ಖಾಸಗಿ ವ್ಯಕ್ತಿಗಳ ಮೂಲಕ ಬೆಳೆಗಳ ಸಂಸ್ಕರಣ ಘಟಕಗಳನ್ನು ಸ್ಥಾಪಿಸಿ ಅಡುಗೆಗೆ ಬೇಕಾದ ಪದಾರ್ಥಗಳನ್ನು ತಯಾರಿಸುವುದು, ಕೋಲ್ಡ್ ಸ್ಟೋರೇಜ್‍ಗಳನ್ನು ಆರಂಭಿಸಿ, ರೈತರ ಉತ್ಪನ್ನಗಳ ಬೆಲೆ ಕುಸಿತವನ್ನು ತಪ್ಪಿಸುವುದು ಸೇರಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು