ಬೆಳ್ತಂಗಡಿ ತಾಲೂಕಿನ ನಮ್ಮೂರ ಸರ್ಕಾರಿ ಪ್ರೌಡ ಶಾಲೆ ಗುರುವಾಯನಕೆರೆಯಲ್ಲಿ “ಶಾಲಾ ಆರಂಭೋತ್ಸವ” ಕಾರ್ಯಕ್ರಮ- ಕಹಳೆ ನ್ಯೂಸ್

ನಮ್ಮೂರ ಸರ್ಕಾರಿ ಪ್ರೌಡ ಶಾಲೆ ಗುರುವಾಯನಕೆರೆಯಲ್ಲಿ ದಿನಾಂಕ 29-05-2019 ರಂದು ಅತ್ಯಂತ ಸಂಭ್ರಮ “ಶಾಲಾ ಆರಂಭೋತ್ಸವ” ಕಾರ್ಯಕ್ರಮವು ಜರಗಿತು. ನಿರಂತರ 8ನೇ ಬಾರಿ 100% ದಾಖಲಿಸಿರುವ ಕರ್ನಾಟಕ ರಾಜ್ಯದ ಏಕೈಕ ಸರ್ಕಾರಿ ಪ್ರೌಡ ಶಾಲೆಯಾಗಿರುವ ಈ ಶಾಲೆಗೆ 8ನೇ ಹಾಗೂ 9ನೇ ತರಗತಿಗಳಿಗೆ ದಾಖಲಾಗುವ ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಬರಮಾಡಿಕೊಳ್ಳಲಾಯಿತು. ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಿ ಶಾಲೆಯ ಶೈಕ್ಷಣಿಕ ಪ್ರಗತಿ ರೀತಿ-ನಿಯಮಗಳಿನ್ನು ಮನದಟ್ಟು ಮಾಡಲಾಯಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಅಶೋಕ್ ಕೋಟ್ಯಾನ್ ಸಭಾಧ್ಯಕ್ಷತೆ ವಹಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ಗೋಪಿನಾಥ್ ನಾಯಕ್, ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಮಮತಾ ಎಂ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಾಕ್ಷರಾದ ಶ್ರೀ ಗೋಪಾಲ ನಾಯ್ಕಬನ, ಸದಸ್ಯರಾದ ಶ್ರೀ ರಾಜಪ್ಪ ಶೆಟ್ಟಿ, ಶ್ರೀ ಜಯಾನಂದ ನಾಯಕ್, ಶ್ರೀಮತಿ ಶೋಭಾ , ಶಾಲಾ ಹಿರಿಯ ಶಿಕ್ಷಕಿ ತ್ರಿವೇಣಿ ಬಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಜಗನ್ನಾಥ್ ಎಲ್ಲಾರನ್ನೂ ಆತ್ಮೀಯವಾಗಿ ಸ್ವಾಗತಿಸಿದರು. ಸಹಶಿಕ್ಷಕರಾದ ಶ್ರೀ ಪ್ರದೀಪ್ ಡಿ ಕಾರ್ಯಕ್ರಮ ನಿರ್ವಹಿಸಿದರು, ಶ್ರೀ ಯೋಗಿಶ್ ನಾಯಕ್ ವಂದಿಸಿದರು.









