
ನಿರ್ದೇಶಿಸಿದ ಕೇವಲ 2ಡೇ ಚಿತ್ರಗಳಿಗೆ ಸ್ಟಾರ್ ಡೈರೆಕ್ಟರ್ ಆಗಿ ಬದಲಾದ ಪ್ರಶಾಂತ್ ನೀಲ್ ಈಗ ಸ್ಯಾಂಡಲ್‍ವುಡ್‍ನ ಬುಹುಬೇಡಿಕೆಯ ನಿರ್ದೇಶಕ. ಪ್ರಶಾಂತ್‍ಗಿಂದು ಹುಟ್ಟುಹಬ್ಬದ ಸಂಭ್ರಮ.

ಪ್ರಶಾಂತ್ ಕೆಜಿಎಫ್ ಚಿತ್ರವೊಂದರಿಂದಲೇ ಮಾಡಿದ ಸಾಧನೆ ಅಷ್ಟಿಷ್ಟಲ್ಲ. ಕನ್ನಡದ ಮೊದಲ 100, 150, 200 ಕೋಟಿ ಕ್ಲಬ್‍ನಲ್ಲಿ ಹೆಸರು ದಾಖಲಿಸಿದ ಸಾಧನೆ ಪ್ರಶಾಂತಿದ್ದು. ಕೆಜಿಎಫ್ ಅಮೋಘ ದಿಗ್ವಿಜಯ ದಾಖಲಿಸಿದ ಬೆನ್ನಲ್ಲೇ, ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣಕ್ಕೆ ಪ್ರಶಾಂತ್ ಈಗಾಗಲೆ ತೊಡಗಿಸಿಕೊಂಡಿದ್ದಾರೆ.

ಆದರೆ ಯಶ್ ಇನ್ನೂ ತಂಡವನ್ನು ಸೇರಿಕೊಳ್ಳದೇ ಇರುವುದರಿಂದ ಚಿತ್ರವು 2020ಕ್ಕೆ ಬರುವುದು ಖಚಿತವಾಗಿದೆ. ಇದಾದ ಮೇಲೆ ಪ್ರಶಾಂತ್ ಯಾರಿಗೆ ನಿರ್ದೇಶನ ಮಾಡಲಿದ್ದಾರೆ ಎಂಬವುದು ತಿಳಿದುಬಂದಿಲ್ಲ. ಆದರೆ ಈ ಹಿಂದೆ ಪ್ರಶಾಂತ್ ನೀಡಿದ ಹೇಳಿಕೆಗನುಗುಣವಾಗಿ ಶ್ರೀಮುರಳಿ ಜೊತೆಗೆ ‘ಉಗ್ರಂ ವೀರಂ’, ಪುನೀತ್ ಜೊತೆಗೆ ‘ಆಹ್ವಾನ’ ಹಾಗೂ ಯಶ್ ಜೊತೆಗೂಡಿ ಮತ್ತೊಂದು ಚಿತ್ರ ‘ಸುಲ್ತಾನ್ ಕೋಟೆ’ ಮಾಡಲಿದ್ದಾರೆ ಎನ್ನಲಾಗುತ್ತಿದೆ.








