
ಮಂಗಳೂರು : ಕರಾವಳಿಯ ಕಡಲ ತೀರದಲ್ಲಿ ಕೆಲದಿನಗಳಿಂದ ಡಾಲ್ಫಿನ್‍ಗಳ ಸರಣಿ ಸಾವು ಕಂಡು ಬರುತ್ತಿದೆ. ಕಳೆದ ಎರಡು ವಾರಗಳಿಂದ ಡಾಲ್ಫೀನ್ ಮೀನುಗಳ ಮೃತದೇಹಗಳು ಸಮುದ್ರ ತೀರದಲ್ಲಿ ಕಾಣ ಸಿಗುತಿದೆ. ಇದೀಗ ಸಸಿಹಿತ್ಲು ಬೀಚ್ ಬಳಿ ಡಾಲ್ಫೀನ್ ಕಳೇಬರ ಪತ್ತೆಯಾಗಿದೆ. ಸಮುದ್ರಕ್ಕೆ ಸೇರುತ್ತಿರುವ ಹಾನಿಕಾರಕ ರಾಸಾಯನಿಕಗಳೇ ಈ ಜಲಚರಜೀವಿಗಳ ಸಾವಿಗೆ ಕಾರಣವೇ ಎಂಬ ಪ್ರಶ್ನೆ ಅನೇಕರಲ್ಲಿ ಮೂಡತೊಡಗಿದೆ. ಕಡಲ ತೀರಕ್ಕೆ ಬರುವ ಪ್ರವಾಸಿಗರು ಆತಂಕಗೊಂಡಿದ್ದು. ಕರಾವಳಿಯ ಮೀನುಗಾರರಲ್ಲಿಯೂ ಆತಂಕ ಮನೆ ಮಾಡಿದೆ.










