
ವಾರಾಣಸಿ: ಮೇ 27 ಪ್ರಧಾನಿ ನರೇಂದ್ರ ಮೋದಿ ವಾರಾಣಸಿಗೆ ಭೇಟಿ ನೀಡುತ್ತಿರುವ ಹಿನ್ನೆಲೆ ನಗರದಲ್ಲಿ ತಯಾರಿ ಬಾರಿ ಜೋರಾಗಿದೆ. ಮೋದಿ ಆಗಮನದ ಹಿನ್ನಲೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ಥಳೀಯ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ವಾರಾಣಸಿಯಲ್ಲಿ ಅತ್ಯಧಿಕ ಮತಗಳ ಅಂತರದಿಂದ ಎರಡನೇ ಬಾರಿ ಜಯಭೇರಿ ಬಾರಿಸಿದ್ದ ನರೇಂದ್ರ ಮೋದಿ ಅಲ್ಲಿನ ಮತದಾರರಿಗೆ ಧನ್ಯವಾದ ಸಮರ್ಪಿಸಲ್ಲಿದ್ದಾರೆ.
ಸುಮಾರು 5 ಕಿ.ಮೀಟರ್ ರ‍್ಯಾಲಿ ನಡೆಯಲಿದ್ದು, ನಂತರ ಸಭೆ ಹಮ್ಮಿಕೊಂಡಿದ್ದಾರೆ. ಮೋದಿ ನಡೆಯುವ ಮಾರ್ಗದಲ್ಲಿ ಕೇಸರಿ ಬಾವುಟ ಹಾರಲಿವೆ, ರಸ್ತೆಯುದ್ದಕ್ಕೂ ಬುದ್ಧನ ಪ್ರತಿಮೆ ಹಾಗೂ ಗೋಡೆ ಬರಹಗಳನ್ನ ಚಿತ್ರಿಸಲಾಗಿದೆ. ಅಲ್ಲದೆ ಮೋದಿಯ ಭದ್ರತೆಯ ದೃಷ್ಟಿಯಿಂದ ಅರೆಸೇನಾ ಪಡೆ ಹಾಗೂ ಪೊಲೀಸರ ನಿಯೋಜನೆಯನ್ನು ಮಾಡಲಾಗಿದೆ.















