Tuesday, April 28, 2026
ಸುದ್ದಿ

ಜೂನ್ ತಿಂಗಳಿನಲ್ಲಿ ಮೋಡಬಿತ್ತನೆ ಮಾಡಲು ರಾಜ್ಯ ಸರ್ಕಾರ ಸಿದ್ಧತೆ – ಕಹಳೆ ನ್ಯೂಸ್

ಈ ಬಾರಿ ಮಳೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಜೂನ್ ತಿಂಗಳಿನಲ್ಲಿ ಮೋಡಬಿತ್ತನೆ ಮಾಡಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಾಗಿರುವ ಕೃಷ್ಣಬೈರೇಗೌಡ ಈ ವಿಷಯವನ್ನು ತಿಳಿಸಿದ್ದು, ಈ ಬಾರಿ ಮಳೆ ಕಡಿಮೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ವರ್ಷ ಹಾಗೂ ಮುಂದಿನ ವರ್ಷ ರಾಜ್ಯದಲ್ಲಿ ಮೋಡ ಬಿತ್ತನೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

2 ವರ್ಷಗಳ ಅವಧಿಗೆ ಟೆಂಡರ್ ನೀಡಲು ತೀರ್ಮಾನಿಸಲಾಗಿದ್ದು, ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಇದರ ಕೇಂದ್ರವನ್ನು ಸ್ಥಾಪಿಸಲಾಗುತ್ತದೆ ಎಂದು ತಿಳಿದು ಬಂದಿದೆ.

ಇನ್ನು ರಾಜ್ಯಾಧ್ಯಂತ ಮೋಡಬಿತ್ತನೆ ಕಾರ್ಯದ ಬಗ್ಗೆ ಜನರೆಲ್ಲರೂ ಕುತೂಹಲ ಹೊಂದಿದ್ದು, ಹಾಗಾದರೆ, ಈ ಮೋಡ ಬಿತ್ತನೆ ಎಂದರೆ ಏನು? ಸರ್ಕಾರ ಮೋಡಬಿತ್ತನೆ ಯನ್ನು ಹೇಗೆ ಮಾಡುತ್ತದೆ? ಇದರ ಹಿಂದಿರುವ ತಂತ್ರಜ್ಞಾನ ಮತ್ತು ವಿಜ್ಞಾನ ಏನು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಎಲ್ಲೆಲ್ಲಿ ಮಳೆ ಸುರಿಸಬಲ್ಲ ಮೋಡಗಳಿವೆ ಎಂಬುದನ್ನು ಪತ್ತೆಹಚ್ಚಿ ಅವುಗಳು ಆ ಪ್ರದೇಶಗಳಲ್ಲಿಯೇ ಮಳೆಸುರಿಸುವಂತೆ ಮಾಡುವ ವೈಜ್ಞಾನಿಕ ತಂತ್ರಜ್ಞಾನವನ್ನು ಮೋಡಬಿತ್ತನೆ ಎಂದು ಕರೆಯಬಹುದು. ಕೆಮಿಕಲ್ ಬಳಸಿ ಪ್ರಕೃತಿಗೆ ವಿರುದ್ದವಾದ ಈ ಕಾರ್ಯಕ್ಕೆ ವಿಶ್ವದೆಲ್ಲೆಡೆ ಅಸಮದಾನವಿದೆ.!!