Monday, April 27, 2026
ಸುದ್ದಿ

ಉತ್ತಮ ಸಂಸ್ಕಾರದಿಂದ ಉತ್ತಮ ಸಮಾಜ – ಕಹಳೆ ನ್ಯೂಸ್

ಪಾಶ್ಚಿಮಾತ್ಯ ಸಂಸ್ಕೃತಿಗೆ ನಮ್ಮ ದೇಶದ ಇಂದಿನ ಪೀಳಿಗೆ ಜನತೆ ಮಾರಿ ಹೋಗಿ ಮಾರ್ಪಾಡಾಗುತ್ತಿರುವ ಸಂದರ್ಭದಲ್ಲಿ, ವಿದೇಶಿಗರು ನಮ್ಮ ದೇಶದ ಸರ್ವಶ್ರೇಷ್ಠ ಸನಾತನ ಸಂಸ್ಕೃತಿಗೆ ತಲೆಬಾಗುತ್ತಿರುವ ಸನ್ನಿವೇಶದಲ್ಲಿ ನಾವು ನಮ್ಮ ದೇಶ-ಸಂಸ್ಕೃತಿಯನ್ನು ಉಳಿಸಬೇಕಾದರೆ, ಇಂದಿನ ಪೀಳಿಗೆಯ ಮಕ್ಕಳಿಗೆ ಸಂಸ್ಕಾರ ಭರಿತ ಶಿಕ್ಷಣವನ್ನು ನೀಡಬೇಕಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ದುರಾದೃಷ್ಟವಶಾತ್ ನಮ್ಮ ದೇಶದಲ್ಲೀ ಈಗಲೂ ಮೆಕಾಲೆ ಶಿಕ್ಷಣವಿರುವ ಕಾರಣ ಸನಾತನದಂತಹ ಸಂಸ್ಥೆಗಳು ಇಂತಹ ಕಾರ್ಯಗಳನ್ನು ನಡೆಸುತ್ತಾ ಬರುತ್ತಿದೆ.

ಮೇ 1ರಿಂದ 7ರವರೆಗೆ ಮಂಗಳೂರಿನ ವೆಂಕಟರಮಣ ದೇವಾಲಯದ ರಾಜಾಂಗಣದಲ್ಲಿ ನಡೆದ ‘ಸಂಸ್ಕಾರ ಶಿಬಿರ’ದಲ್ಲಿ ಹತ್ತು ವರ್ಷ ಕೆಳಪಟ್ಟ ಮಕ್ಕಳಿಗೆ ಮತ್ತು 12ವರ್ಷ ಮೇಲ್ಪಟ್ಟ ಮಕ್ಕಳಿಗೆ ಪ್ರತ್ಯೇಕ ಸಮಯಗಳಲ್ಲಿ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು.

ಶಿಬಿರಾರ್ಥಿಗಳಿಗೆ ಮಾನಸಿಕವಾಗಿ ಸಧೃಡರಾಗಲು ಭಗವದ್ಗೀತೆ, ನಿತ್ಯ ಪ್ರಾರ್ಥನಾ ಸ್ತ್ರೋತ್ರ, ಶ್ಲೋಕ-ಭಜನೆ, ಸ್ಪೂರ್ತಿ ತುಂಬುವಂತಹ ಪೌರಾಣಿಕ ಕಥೆಗಳು, ಸೂರ್ಯ ನಮಸ್ಕಾರ ಮತ್ತು ಯೋಗ ಇದರ ಜೊತೆಗೆ ಬುದ್ಧಿಮತ್ತೆಯನ್ನು ಚುರುಕುಗೊಳಿಸಲು ಮೆಹೆಂದಿ, ಅಲಂಕಾರಿಕ ಪುಷ್ಪ ತಯಾರಿ, ಕೇಶವಿನ್ಯಾಸ, ಪಾಕ-ಪಾಠ, ಪ್ರಥಮ ಚಿಕಿತ್ಸಾ ಜ್ಞಾನ, ಆತ್ಮ ರಕ್ಷಣೆಗಾಗಿ ಅಭ್ಯಾಸಗಳು, ವ್ಯಕ್ತಿತ್ವ ವಿಕಸನ. ಇವೆಲ್ಲದರ ಜೊತೆಗೆ ಪ್ರತಿಭಾ ಪ್ರದರ್ಶನ ಮತ್ತು ಆಟಗಳನ್ನು ಇತ್ಯಾದಿ ವಿಷಯಗಳನ್ನು ಹೇಳಿಕೊಡಲಾಯಿತು. ಕಾರ್ಯಕ್ರಮವನ್ನು ಅಂಕಿತಾ ಕಾಮತ್ ಮುಂದಾಳತ್ವದಲ್ಲಿ ಆಯೋಜಿಸಲಾಗಿತ್ತು.