BREAKING NEWS: ಸುಳ್ಯದಲ್ಲಿ ನಿಂತಿದ್ದ ಲಾರಿಗೆ ಓಮ್ನಿ ಕಾರು ಡಿಕ್ಕಿ; ಓರ್ವ ಸ್ಥಳದಲ್ಲೇ ಸಾವು – ಕಹಳೆ ನ್ಯೂಸ್

ಸುಳ್ಯ: ಸುಳ್ಯ ಸಂಪಾಜೆ ಗೇಟ್ ಬಳಿ ನಿಂತಿದ್ದ ಲಾರಿಗೆ ಓಮ್ನಿ ಕಾರು ಡಿಕ್ಕಿ ಹೊಡೆದ ಘಟನೆ ನಡೆದಿದೆ. ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾನೆ.
ಮೃತನನ್ನು ಪುತ್ತೂರು ಮೂಲದ ಬೆದ್ರಾಳ ನಿವಾಸಿ ಜಯರಾಮ ಎಂದು ಗುರುತಿಸಲಾಗಿದೆ. ಜಯರಾಮ ಸಹೋದರ ಓಮ್ನಿ ಚಲಾಯಿಯಿಸುತ್ತಿದ್ದ ಅವರಿಗೂ ಗಂಭೀರ ಗಾಯವಾಗಿದೆ.









